

ನೀರಿನ ಮೇಲೆ ನಡೆಯುವುದು ಈಗ ಕೇವಲ ಸಾಧಕರ ಸಾಹಸವಲ್ಲ. ನಾವು ನೀವೂ ನಡೆದು ಪವಾಡ ಮಾಡಬಹುದು ಎಂದರೆ ಆಶ್ಚರ್ಯವಾಗಬಹುದಲ್ಲವೇ? ನಿಜಕ್ಕೂ ಇದು ಸತ್ಯ.
ಇಷ್ಟೆಲ್ಲ ಪವಾಡ ಮಾಡಬಹುದಾದದ್ದು ಒಂದು ಶೂನಿಂದ! ಸ್ಕೀ ಗಳಂತೆಯೇ ಇರುವ ಈ ಶೂ ಗಳನ್ನು ಧರಿಸಿದ ಮೇಲೆ ನೀರಿನ ಮೇಲೆ ಪೋಲ್ ಗಳ ಸಹಾಯದಿಂದ ಬೇಕಾದ ದಿಕ್ಕಿನಲ್ಲಿ ಚಲಿಸಬಹುದು.
ಈ ಶೂ ನೋಡಿ ಗಾಭರಿಯಾಗಬೇಡಿ, ನೋಡಲು ಸ್ವಲ್ಪ ದೊಡ್ಡದಾಗಿದ್ದರೂ ತುಂಬಾ ಹಗುರವಾಗಿದೆ. ಅಗಲವಾಗರಿವುದರಿಂದಲೇ ನೀರಿನಲ್ಲಿ ತೇಲಲು ಸಹಾಯಕವಾಗಿವೆ.
ಇದರ ಬೆಲೆಯೂ ಕಡಿಮೆ ಇದ್ದು, ಯಾರೂ ಬೇಕಾದರೂ ಖರೀದಿಸಿ ನೀರಿನ ಮೇಲೆ ತೇಲಬಹುದು, ಅಷ್ಟೇ ಅಲ್ಲ ಸಮುದ್ರದ ಮಧ್ಯದವರೆಗೂ ಹೋಗಿ ಮೀನು ಕೂಡ ಹಿಡಿಯಬಹುದು.