ಮುಂಬೈ: ಮುಖೇಶ್ ಅಂಬಾನಿ ಅವರ ಬಹು ನಿರೀಕ್ಷೆಯ ರಿಲಾಯನ್ಸ್ ಜಿಯೋ 4ಜಿಗೆ ಭಾನುವಾರ ವರ್ಣರಂಜಿತ ಸಮಾರಂಭದಲ್ಲಿ ಅಧಿಕೃತ ಚಾಲನೆ ಸಿಕ್ಕಿದೆ.
ಬಾಲಿವುಡ್ ನಟ ಶಾರೂಖ್ ಖಾನ್ ಮತ್ತು ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರು ನಡೆಸಿಕೊಟ್ಟ ಈ ಸಮಾರಂಭದಲ್ಲಿ ಜಿಯೋ 4ಜಿ ಸೇವೆಯನ್ನು ರಿಲಯನ್ಸ್ ಉದ್ಯೋಗಿಗಳಿಗೆ ನೀಡಲಾಯಿತು.
ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ನಲ್ಲಿ ನಡೆದ ಸಮಾರಂಭದಲ್ಲಿ 35 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಸೇರಿದ್ದರು. ಸದ್ಯ ಈ ಸೇವೆ ರಿಲಯನ್ಸ್ ಉದ್ಯೋಗಿಗಳಿಗೆ ಸಾರ್ವಜನಿಕರಿಗೆ 201617 ಹಣಕಾಸು ವರ್ಷದಲ್ಲಿ ಸಿಗಲಿದೆ.