ಸ್ಟೀವ್ ಜಾಬ್ಸ್ ಸಾಕ್ಷ್ಯಚಿತ್ರದ ಟ್ರೇಲರ್ ಬಿಡುಗಡೆ

'ಸ್ಟೀವ್ ಜಾಬ್ಸ್-ಮ್ಯಾನ್ ಇನ್ ದ ಮೆಷಿನ್' ಸಾಕ್ಷಚಿತ್ರದ ಮೊದಲ ಟ್ರೇಲರ್ ಈಗ ಲಭ್ಯವಿದೆ. ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಅಲೆಕ್ಸ್ ಗಿಬ್ನಿ ನಿರ್ದೇಶನದ ಈ
ಆಪಲ್ ಸಂಸ್ಥೆಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್
ಆಪಲ್ ಸಂಸ್ಥೆಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್

ಲಾಸೇಂಜಲಿಸ್: 'ಸ್ಟೀವ್ ಜಾಬ್ಸ್-ಮ್ಯಾನ್ ಇನ್ ದ ಮೆಷಿನ್' ಸಾಕ್ಷಚಿತ್ರದ ಮೊದಲ ಟ್ರೇಲರ್ ಈಗ ಲಭ್ಯವಿದೆ. ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಅಲೆಕ್ಸ್ ಗಿಬ್ನಿ ನಿರ್ದೇಶನದ ಈ ಸಾಕ್ಷ್ಯಚಿತ್ರದಲ್ಲಿ ಆಪಲ್ ಸಂಸ್ಥೆಯ ಸಹ ಸಂಸ್ಥಾಪಕ ದಿವಂಗತ ಸ್ಟೀವ್ ಜಾಬ್ಸ್ ನ ಏಳು ಬೀಳುಗಳನ್ನು ಚಿತ್ರಿಸಲಾಗಿದೆ,

ಹಳೆಯ ದೃಶ್ಯಾವಳಿಗಳು, ಹೊಸ ಸಂದರ್ಶನಗಳಿಂದ ಕೂಡಿರುವ ಈ ಸಾಕ್ಷ್ಯಚಿತ್ರದಲ್ಲಿ ಜಾಬ್ಸ್ ಅವರ ಖಾಸಗಿ ಮತ್ತು ವೃತ್ತಿಪರ ಜೀವನನವನ್ನು ಸಮಾನವಾಗಿ ಚರ್ಚಿಸಲಾಗಿದೆ.

ಜಾಬ್ಸ್ ಅವರ ಅದ್ಭುತ ವೃತ್ತಿಪರ ಜೀವನವನ್ನು ಚಿತ್ರಿಸುವುದಲ್ಲದೆ ಅವರ ಋಣಾತ್ಮಕ ಅಂಶಗಳನ್ನೂ ಸಮಾನವಾಗಿ ಚಿತ್ರೀಕರಿಸಲಾಗಿದೆಯಂತೆ.

ಗಿಬ್ನಿ ಮತ್ತು ವಿವಾ ವ್ಯಾನ್ ಲಾಕ್ ನಿರ್ಮಿಸಿರುವ ಈ ಸಾಕ್ಷಚಿತ್ರವನ್ನು ಸೀಮಿತ ಚಿತ್ರಮಂದಿರಗಳಲ್ಲಿ ಸೆಪ್ಟಂಬರ್ ನಾಲ್ಕರಂದು ಅಮೇರಿಕಾದಲ್ಲಿ ಬಿಡುಗಡೆ ಮಾಡಲಾಗುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com