ಇಂದು ಎಂದಿನಂತಲ್ಲ; 1 ಸೆಕೆಂಡು ದೀರ್ಘ ಮಂಗಳವಾರ

ಮಂಗಳವಾರದ ದಿನ ಎಂದಿನಂತಲ್ಲ. ಒಂದು ಸೆಕೆಂಡು ದೀರ್ಘವಾಗಿರಲಿದೆ. ಭೂಮಿಯ ಪರಿಭ್ರಮಣೆಯು ಕ್ರಮೇಣವಾಗಿ ನಿಧಾನವಾಗುತ್ತಾ ಬರುತ್ತಿರುವ ಕಾರಣ, ಜೂ.30ರ ಕೊನೆಯ ನಿಮಿಷಕ್ಕೆ ಈ ಲೀಪ್ ಸೆಕೆಂಡು (ಹೆಚ್ಚುವರಿ ಸೆಕೆಂಡು) ಸೇರ್ಪಡೆಯಾಗಲಿದೆ ಎಂದು ನಾಸಾ ತಿಳಿಸಿದೆ.
ಲೀಪ್ ಸೆಕೆಂಡ್
ಲೀಪ್ ಸೆಕೆಂಡ್
Updated on: 

ವಾಷಿಂಗ್ಟನ್: ಮಂಗಳವಾರದ ದಿನ ಎಂದಿನಂತಲ್ಲ. ಒಂದು ಸೆಕೆಂಡು ದೀರ್ಘವಾಗಿರಲಿದೆ. ಭೂಮಿಯ ಪರಿಭ್ರಮಣೆಯು ಕ್ರಮೇಣವಾಗಿ ನಿಧಾನವಾಗುತ್ತಾ ಬರುತ್ತಿರುವ ಕಾರಣ, ಜೂ.30ರ ಕೊನೆಯ ನಿಮಿಷಕ್ಕೆ ಈ ಲೀಪ್ ಸೆಕೆಂಡು (ಹೆಚ್ಚುವರಿ ಸೆಕೆಂಡು) ಸೇರ್ಪಡೆಯಾಗಲಿದೆ ಎಂದು ನಾಸಾ ತಿಳಿಸಿದೆ.

ಸಾಮಾನ್ಯವಾಗಿ ದಿನದ ಅಂತ್ಯದಲ್ಲಿ ಗಡಿಯಾರವು 23:59:59 ರಿಂದ 00:00:00ಕ್ಕೆ ತಿರುಗಿ ಮರುದಿನ ಆರಂಭವಾಗುತ್ತದೆ. ಆದರೆ, ಮಂಗಳವಾರ ಹೆಚ್ಚುವರಿ ಸೆಕೆಂಡು ಬರುವ ಕಾರಣ ಗಡಿಯಾರ 23:59:59 ರಿಂದ 23:59:60ಕ್ಕೆ ತಿರುಗಿ ನಂತರ 00:00:00 ಆಗಲಿದೆ.

ಬದಲಾಯಿತು ಸಮಯ
1972ರ ಜನವರಿಯಿಂದ ಕೋಆರ್ಡಿನೇಟೆಡ್ ಯುನಿವರ್ಸಲ್ ಟೈಮ್ (ಯುಟಿಸಿ) ಅನ್ನು ಸ್ವಲ್ಪ ಬದಲಿಸಿ ಜೂನ್ ಅಥವಾ ಡಿಸೆಂಬರ್‍ನ ಕೊನೆಯ ನಿಮಿಷಕ್ಕೆ ಒಂದು ಹೆಚ್ಚುವರಿ ಸೆಕೆಂಡ್ ಸೇರಿಸಲಾಯಿತು. ಹೀಗಾಗಿ ಜೂನ್ 30ರಂದು ಸಮಯವು ಒಂದು ಸೆಕೆಂಡು ಕಾಲ ಸ್ಥಗಿತಗೊಳ್ಳಲಿದೆ. ಈ ಮೂಲಕ ಈ ತಿಂಗಳ ಕೊನೆಯ ನಿಮಿಷ 61 ಸೆಕೆಂಡುಗಳಿರಲಿವೆ.

ಕಂಪ್ಯೂಟರ್ ಮೇಲೆ ಪರಿಣಾಮ?
ಭೂಮಿಗೆ ತನ್ನ ಅಕ್ಷದಲ್ಲಿ ಸುತ್ತಲು ಎಷ್ಟು ಸಮಯ ಬೇಕು ಎಂಬುವುದು ಹಲವು ಅಂಶಗಳ ಮೇಲೆ ಅವಲಂಬಿತವಾಗಿದೆ. ಅವೆಂದರೆ, ಭೂಮಿಯ ಮಧ್ಯಭಾಗದ ಚಲನಶೀಲತೆ, ವಾತಾವರಣ ಮತ್ತು ಸಮುದ್ರದಲ್ಲಿನ ಬದಲಾವಣೆ, ಅಂತರ್ಜಲ, ಮಂಜುಗಡ್ಡೆಯ ಸಂಗ್ರಹ ಇತ್ಯಾದಿ. ಹೀಗಾಗಿ ಯಾವಾಗ ಈ ಹೆಚ್ಚುವರಿ ಸೆಕೆಂಡು(ಇದನ್ನು ಲೀಪ್ ಸೆಕೆಂಡ್ ಎಂದೂ ಕರೆಯುತ್ತಾರೆ) ಸಂಭವಿಸುತ್ತದೆ ಎನ್ನುವುದನ್ನು ಮೊದಲೇ ಕಂಡುಕೊಳ್ಳಲು ಸಾಧ್ಯವಿಲ್ಲ. ಲೀಪ್ ಸೆಕೆಂಡಿನಲ್ಲಾಗುವ ಅನಿಶ್ಚಿತತೆಯು ಹಲವು ಕಂಪ್ಯೂಟಿಂಗ್ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. 3 ವರ್ಷಗಳ ಹಿಂದೆ ಲೀಪ್ ಸೆಕೆಂಡು ಸೇರ್ಪಡೆಯಾದ ಕಾರಣ ಪ್ರಮುಖ ವೆಬ್ ಆಧರಿತ ಸೇವೆಗಳಿಗೆ ತೊಂದರೆಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com