ಮುಂಬೈ: ಡಿಸೆಂಬರ್ ಮತ್ತು ಜನವರಿಯಲ್ಲಿ ಲೂಮಿಯಾ 950 ಮತ್ತು ಸರ್ಫೇಸ್ ಪ್ರೊ 4 ಎರಡು ಹೊಸ ಮಾದರಿ ಮೊಬೈಲ್‍ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಮೈಕ್ರೊಸಾಫ್ಟ್ ಕಂಪನಿ ಸಿಇಒ ಸತ್ಯ ನಾದೆಳ್ಳ ತಿಳಿಸಿದ್ದಾರೆ.
ಮೈಕ್ರೊಸಾಫ್ಟ್ ಕ್ಲೌಡ್ ಮತ್ತು ಸರ್ಫೇಸ್ ಪ್ರೊ 4ರಿಂದ ಗ್ರಾಹಕರು ತಮಗೆ ಬೇಕಾದ ಡಿಜಿಟಲ್ ತಂತ್ರಜ್ಞಾನವನ್ನು ಪಡೆದುಕೊಳ್ಳ ಬಹುದು. ಇದರೊಂದಿಗೆ ಹೊಸ ಅವಕಾಶಗಳನ್ನು ಪಡೆಯುವುದರ ಜೊತೆಗೆ ಅಭಿವೃದ್ಧಿ ಸಾಧಿಸ ಬಹುದು ಎಂದು ಭಾರತ ಪ್ರವಾಸದಲ್ಲಿರುವ ಸತ್ಯ ನಾದೆಳ್ಳ ತಿಳಿಸಿದ್ದಾರೆ.
ಉದ್ಯಮಿಗಳು, ಜನ ಮತ್ತು ಸರ್ಕಾರಗಳನ್ನು ಸಬಲೀಕರಣಗೊಳಿಸುವುದು ಕಂಪನಿ ಗುರಿಯಾಗಿದೆ ಎಂದು ಹೇಳಿದ್ದಾರೆ. ಸರ್ಫೇಸ್ ಪ್ರೊ 4 ಮೊಬೈಲ್ ದರ ರು.75,000 ಎಂದು ಹೇಳಲಾಗಿದೆ.