ಅತೀ ವೇಗದಲ್ಲಿ ಸರಕು ಸಾಗಣೆ ಅಥವಾ ಪ್ರಯಾಣಕ್ಕಾಗಿ ಈ ಟೆಕ್ನಾಲಜಿಯನ್ನು ಬಳಸಲಾಗುತ್ತದೆ. ಅತೀ ವೇಗದ ಸಾರಿಗೆ ವ್ಯವಸ್ಥೆಯಾಗಿದೆ ಹೈಪರ್‌ಲೂಪ್ ಸಾರಿಗೆ. ಈ ಸಾರಿಗೆ ವ್ಯವಸ್ಥೆಯಲ್ಲಿ ಎರಡು ಪ್ರದೇಶಗಳ ನಡುವೆ ಉದ್ದವಾದ ಟ್ಯೂಬ್ ಒಂದನ್ನು ನಿರ್ಮಿಸಲಾಗುತ್ತದೆ. ಆ ಟ್ಯೂಬ್ ಮೂಲಕ ಅತೀ ವೇಗದಲ್ಲಿ ವಾಹನ ಸಂಚಾರ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮುಂಬರುವ ಎರಡು ವರ್ಷಗಳಲ್ಲಿ ಈ ಬಗ್ಗೆ ಪ್ರಯೋಗ ನಡೆಯಲಿದ್ದು, 2020ರ ವೇಳೆಗೆ ಈ ಯೋಜನೆ ಪೂರ್ಣಗೊಳಿಸುವ ಇರಾದೆ ಇದೆ ಎಂದು ಪೀಟರ್ ಡಯಾಮಂಡಿಸ್ ಹೇಳಿದ್ದಾರೆ.