ಇ- ಮೇಲ್ ಪಾಸ್ವರ್ಡ್ ಗೆ ತಿಲಾಂಜಲಿ ಹಾಡಲು ಯಾಹೂ ನಿರ್ಧಾರ

ಮೇಲ್‌ಗೆ ಪಾಸ್‌ವರ್ಡ್ ಹಾಕುವುದಕ್ಕೆ ತಿಲಾಂಜಲಿ ಹಾಡಲು ಯಾಹೂ ಮುಂದಾಗಿದೆ.ಅಕೌಂಟ್ ಕೀ' ಎಂಬ ಸುಧಾರಿತ ಅಪ್ಲಿಕೇಷನ್‌ ಅನ್ನು ಅ್ಯಂಡ್ರಾಯ್ಡ್ ಹಾಗೂ ಐಫೋನ್‌ಗಳಿಗೆ ಯಾಹೂ ಬಿಡುಗಡೆಗೊಳಿಸಿದೆ...
ಯಾಹೂ ಕಂಪನಿ
ಯಾಹೂ ಕಂಪನಿ
Updated on

ಸ್ಯಾನ್‌ಫ್ರಾನ್ಸಿಸ್ಕೋ: ಇ-ಮೇಲ್‌ಗೆ ಪಾಸ್‌ವರ್ಡ್ ಹಾಕುವುದಕ್ಕೆ ತಿಲಾಂಜಲಿ ಹಾಡಲು ಯಾಹೂ ಮುಂದಾಗಿದೆ. 'ಅಕೌಂಟ್ ಕೀ' ಎಂಬ ಸುಧಾರಿತ ಅಪ್ಲಿಕೇಷನ್‌ ಅನ್ನು ಅ್ಯಂಡ್ರಾಯ್ಡ್ ಹಾಗೂ ಐಫೋನ್‌ಗಳಿಗೆ ಯಾಹೂ ಬಿಡುಗಡೆಗೊಳಿಸಿದೆ. ಇದರಿಂದ ಬಳಕೆದಾರರು ತಮ್ಮ ಇ-ಮೇಲ್ ಅಕೌಂಟ್‌ಗೆ ಲಾಗ್ ಇನ್ ಆಗಲು, ಪೋನ್‌ಗೆ ಬಂದ ನೋಟಿಫಿಕೇಷನ್ ಕ್ಲಿಕ್ ಮಾಡಿದರೆ ಸಾಕು. ಪಾಸ್‌ವರ್ಡ್ ಕೀ ಮಾಡೋದು, ಅದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಜಂಜಾಟವೂ ಇರುವುದಿಲ್ಲ.

ಬಳಕೆದಾರರು ಪಾಸ್‌ವರ್ಡ್ ಮೇಲೆ ಅವಲಂಬಿತರಾದಾಗ, ಹ್ಯಾಕ್ ಆಗುವ ಅವಕಾಶಗಳೂ ಹೆಚ್ಚಿರುತ್ತದೆ. ಹಾಗಂತ ಪಾಸ್‌ವರ್ಡ್ ಟೈಪ್ ಮಾಡುವ ಪದ್ಧತಿಗೆ ಸಂಪೂರ್ಣ ತಿಲಾಂಜಲಿಯೂ ಹಾಡುವುದಿಲ್ಲ. ಬಳಕೆದಾರರು ಅಗತ್ಯವಿದ್ದಲ್ಲಿ, ಅದನ್ನು ಬಳಸಲು ಅವಕಾಶವೂ ಇರುತ್ತದೆ. 'ಇಂಟರ್ನೆಟ್‌ಗೆ ಅನ್ವರ್ಥವೆಂಬಂತೆ ಯಾಹೂವನ್ನು ಇನ್ನೂ ಅನೇಕ ದೇಶಗಳಲ್ಲಿ ಬಳಸಲಾಗುತ್ತಿದ್ದು, ಬಳಕೆದಾರರ ಹಿತರಕ್ಷಣಾ ದೃಷ್ಟಿಯಿಂದ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ, ಎಂದು ಯಾಹೂ ತಿಳಿಸಿದೆ.

ಅರ್ಧದಷ್ಟು ಯಾಹೂ ಬಳಕೆದಾರರು ತಮ್ಮ ಸಂದೇಶಗಳನ್ನು ಮೊಬೈಲ್‌ಗಳಲ್ಲಿಯೇ ಪರೀಕ್ಷಿಸುವುದರಿಂದ, ಯಾಹೂಗೆ ತನ್ನ ಅಪ್ಲಿಕೇಷನ್‌ ಅನ್ನು ಅಭಿವೃದ್ಧಿಗೊಳಿಸುವುದು ಅನಿವಾರ್ಯವಾಗಿತ್ತು. ಇಂಟರ್ನೆಟ್‌ ಜಗತ್ತಿನಲ್ಲಿ ಗೂಗಲ್ ಹಾಗೂ ಫೇಸ್‌ಬುಕ್ ಬೀರುತ್ತಿರುವ ಪ್ರಭಾವದಿಂದ ಕಳೆದ ಕೆಲವು ವರ್ಷಗಳಿಂದ ಯಾಹೂ ತನ್ನ ಆದಾಯವನ್ನು ಹೆಚ್ಚಿಸಿ ಕೊಳ್ಳುವಲ್ಲಿ ವಿಫಲವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com