ಶಕೀರಾ ಬಿಟ್ಟ ಗೇಮ್ ಆ್ಯಪ್‍ನಲ್ಲಿ ತಾಜ್‍ಮಹಲ್!

ಎಂಟು ತಿಂಗಳ ಲಾಂಗ್‍ಗ್ಯಾಪ್‍ನಿಂದ ಹೊರಬರುತ್ತಿರುವ ಪಾಪ್ ತಾರೆ ಶಕೀರಾ ಒಂದೊಂದೇ ಪ್ಲಾಟ್ಫಾರಂ ರೆಡಿ ಮಾಡ್ಕೊಳ್ತಿದ್ದಾಳೆ...
ಪಾಪ್ ತಾರೆ ಶಕೀಲಾ
ಪಾಪ್ ತಾರೆ ಶಕೀಲಾ
Updated on

ಎಂಟು ತಿಂಗಳ ಲಾಂಗ್‍ಗ್ಯಾಪ್‍ನಿಂದ ಹೊರಬರುತ್ತಿರುವ ಪಾಪ್ ತಾರೆ ಶಕೀರಾ ಒಂದೊಂದೇ ಪ್ಲಾಟ್ಫಾರಂ ರೆಡಿ ಮಾಡ್ಕೊಳ್ತಿದ್ದಾಳೆ. ಮೊನ್ನೆ ಫೋಟೋಶೂಟ್ ಆಯ್ತು. ಈಗ `ಗೇಮ್' ಆಗಿ ಮೊಬೈಲಿನಲ್ಲಿ ಬರ್ತಿದ್ದಾಳೆ. 

ಯಸ್... `ವಾಕಾ ವಾಕಾ' ಶಕೀರಾ ಈಗ ಗೇಮ್ ಆ್ಯಪ್ ಆಗ್ಬಿಟ್ಟಿದ್ದಾಳೆ! ಇದು ಪಝಲ್ ಆಟದ ಥರ ಇದ್ದು, ನೀವೂ ಇದನ್ನು ಡೌನ್‍ಲೋಡ್ ಮಾಡ್ಕೋಬೇಕಾದ್ರೆ `ಲವ್ ರಾಕ್ಸ್' ಎಂದು ಆ್ಯಪ್‍ಸ್ಟೋರ್‍ನಲ್ಲಿ ಟೈಪಿಸಿ ಸಾಕು. ಹೀಗೆ ಗೇಮ್ ಆ್ಯಪ್ ಬಿಡಲು ಹೇಳಿದ್ದು, ಗಂಡ ಗೆರಾರ್ಡ್ ಪಿಗ್ಯು. 

ಈ ಸ್ಪೇನ್ ಫುಟ್ಬಾಲಿಗನಿಗೆ ಗೇಮ್ಸ್ ಆ್ಯಪ್ ಅಂದ್ರೆ ಸಿಕ್ಕಾಪಟ್ಟೆ ಕ್ರೇಜ್ ಅಂತೆ. ಶಕೀರಾ ಹೆಸರಿನಲ್ಲೂ ಒಂದು ಆ್ಯಪ್ ಬಿಟ್ಟರೆ ಇನ್ನಷ್ಟು ಜನಪ್ರಿಯತೆ ಹೆಚ್ಚುತ್ತದೆಂದು ನಿರ್ಧರಿಸಿ, ಹೆಂಡ್ತಿಗೆ ಹೇಳಿದ್ದಾನೆ. ಶಕೀರಾ ಕೂಡಲೇ ಆ್ಯಪ್ ರೆಡಿಮಾಡಿಸಿದ್ದಾಳೆ. ಶಕೀರಾ ಈಗಾಗಲೇ ಎರಡನೇ ಮಗುವಿಗೆ ಜನ್ಮ ನೀಡಿದ್ದು, ಸ್ಟೇಜಿಗೆ ಬಂದು ಹಾಡಲು ಇನ್ನೂ ಕೆಲ ತಿಂಗಳು ಬೇಕಂತೆ. 

ಈ ಅಂತರದಲ್ಲಿ ಅಭಿಮಾನಿಗಳಿಗೆ ಬೇಸರ ಆಗಬಾರದೆನ್ನುವ ಕಾರಣಕ್ಕೆ ಗೇಮ್ ಆ್ಯಪ್ ಅನ್ನು ಬಿಡಲಾಗಿದೆ. ಈ ಗೇಮ್ ಆಡುವಾಗ ಶಕೀರಾ ಹಾಡುಗಳೂ ಬರುತ್ತವೆ. ಹೀಗಾಗಿ, ಜಗತ್ತಿನ ಎಲ್ಲ ಅಭಿಮಾನಿಗಳನ್ನು ಬೆರಳ ತುದಿಯಲ್ಲೇ ತಲುಪುವ ಉದ್ದೇಶ ಶಕೀರಾಳದ್ದು. ಅಂದಹಾಗೆ, ಈ ಆಟಕ್ಕೂ ನಮ್ಮ ಭಾರತಕ್ಕೂ ಸಂಬಂಧವಿದೆ. `ಲವ್ ರಾಕ್ಸ್' ಆಟವನ್ನು ಜಗತ್ತಿನ ಬೇರೆಬೇರೆಯಡೆ ಆಡಲು ಇಲ್ಲಿ ಅವಕಾಶವಿದೆ. 

ಇಂಥ ಐತಿಹಾಸಿಕ ತಾಣಗಳಲ್ಲಿ ನಮ್ಮ ತಾಜ್‍ಮಹಲ್ ಸ್ಮಾರಕವನ್ನೂ ಇಲ್ಲಿ ಸೇರಿಸಿದ್ದಾಳೆ ಶಕೀರಾ! ಇನ್ನುಳಿದಂತೆ ಈಕೆಯ ಮನೆಯಿರುವ ಬಾರ್ಸಿಲೋನಾ, ಎಲ್ ಡೊರಾಡೋ ಮತ್ತು ಕೊಲಂಬಿಯನ್ ಸಿಟಿಯ ಆಯ್ಕೆಗಳೂ ಇಲ್ಲಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com