ಸೆಲ್ಫಿ ಸ್ಟಿಕ್ ಹೊಂದಿರುವ ಸ್ಪೂನ್ ಇದಾಗಿದ್ದು 30 ಇಂಚುಗಳಷ್ಟು (76.2 ಸೆಮೀ) ಉದ್ದವಿದೆ. ಇದರಿಂದಾಗಿ ಊಟ ಮಾಡುವ ಹೊತ್ತಲ್ಲೇ ಸೆಲ್ಫೀ ಕ್ಲಿಕ್ಕಿಸಿಕೊಳ್ಳಬಹುದಾಗಿದೆ.
ದ ಜನರಲ್ ಮಿಲ್ಸ್ ಬ್ರಾಂಡ್ ಸಿನ್ನೆಮನ್ ಟೋಸ್ಟ್ ಕ್ರಂಚ್ ಈ ಸ್ಪೂನ್ ನ್ನು ತಯಾರಿಸಿದ್ದು, ಊಟದ ಜತೆಗೆ ಸೆಲ್ಫಿ ತೆಗೆದುಕೊಳ್ಳುವವರ ಕಷ್ಟಕ್ಕೆ ಪರಿಹಾರ ಸೂಚಿಸಿದೆ.
ಈ ಸೆಲ್ಫೀ ಸ್ಪೂನ್ನಿಂದ ಫೋಟೋ ಕ್ಲಿಕ್ಕಿಸಬೇಕಾದರೆ ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ ನಲ್ಲಿ ಬ್ಲೂಟೂಥ್ ಆನ್ ಮಾಡಬೇಕಾಗಿದೆ. ಆ್ಯಂಡ್ರಾಯ್ಡ್ ಫೋನ್ ಮತ್ತು ಐಫೋನ್ ಗಳಲ್ಲಿ ಗ್ರೇ ಬಟನ್ ಅದುಮುವ ಮೂಲಕ ಸೆಲ್ಫೀ ಸ್ಪೂನ್ ನಲ್ಲಿ ಫೋಟೋ ಕ್ಲಿಕ್ ಮಾಡಬಹುದು.
ಸೆಲ್ಫೀ ಸ್ಪೂನ್ ಖರೀದಿಸಬೇಕಾದರೆ SelfieSpoon.com ಗೆ ಲಾಗ್ ಇನ್ ಆಗಿ ಆರ್ಡರ್ ಮಾಡಬಹುದು.