ಭಾರತೀಯ ಸಂಜಾತ ಉದ್ಯಮಿಯಿಂದ ಫೋಟೊ ಹಂಚಿಕೆ ಆಪ್ ಬಿಡುಗಡೆ

ಸ್ಯಾನ್ ಪ್ರಾನ್ಸಿಸ್ಕೊದಲ್ಲಿರುವ ಭಾರತೀಯ ಸಂಜಾತ ಉದ್ಯಮಿ ಸಚಿನ್ ದೇವ್ ದುಗ್ಗಲ್, ನೂತನ ಫೋಟೊ ಹಂಚಿಕೆ ಆಪ್ 'ಶೋಟೊ' ನ್ನು ವಿಶ್ವಾದ್ಯಂತ ಬಿಡುಗಡೆಗೊಳಿಸಿದ್ದಾರೆ.
ಶೋಟೊ
ಶೋಟೊ
Updated on: 

ನವದೆಹಲಿ: ಸ್ಯಾನ್ ಪ್ರಾನ್ಸಿಸ್ಕೊದಲ್ಲಿರುವ  ಭಾರತೀಯ ಸಂಜಾತ ಉದ್ಯಮಿ ಸಚಿನ್ ದೇವ್ ದುಗ್ಗಲ್, ನೂತನ ಫೋಟೊ ಹಂಚಿಕೆ ಆಪ್ 'ಶೋಟೊ' ನ್ನು ವಿಶ್ವಾದ್ಯಂತ ಬಿಡುಗಡೆಗೊಳಿಸಿದ್ದಾರೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿ ಒಂದು ಟ್ರಿಲಿಯನ್ ಚಿತ್ರಗಳನ್ನು ತೆಗೆಯಲಾಗಿದೆ. ಶೋಟೊ ಆಪ್ ನಿಂದ ಫೋಟೊಗಳನ್ನು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಮತ್ತಷ್ಟು ಸುಲಭವಾಗಲಿದೆ ಎಂದು ಸಚಿನ್ ದೇವ್ ದುಗ್ಗಲ್ ಹೇಳಿದ್ದಾರೆ.

ಸ್ನೇಹಿತರೊಂದಿಗೆ, ಕುಟುಂಬದವರೊಂದಿಗೆ ಎಷ್ಟು ಫೋಟೊಗಳನ್ನು ತೆಗೆಸಿಕೊಂಡಿದ್ದೀರಿ ಎಂಬ ಮಾಹಿತಿ ನೀಡುವುದರೊಂದಿಗೆ, ಖಾಸಗಿ ಆಲ್ಬಮ್ ನ್ನು ರಚಿಸಲೂ ಶೋಟೊ ಸಹಕಾರಿಯಾಗಲಿದೆ. ಶೋಟೊ ಬಳಕೆ ಗೌಪ್ಯತೆಗೂ ಸಹಕಾರಿಯಾಗಿರಲಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಆಪ್ ನ್ನು ಡೌನ್ ಲೋಡ್ ಮಾಡಬಹುದಾಗಿದೆ. 120 ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಆಪ್ ಬಿಡುಗಡೆಯಾಗಿದ್ದು ಹಿಂದಿ, ಸ್ಪ್ಯಾನಿಷ್, ಫ್ರೆಂಚ್ ಭಾಷೆಗಳಲ್ಲಿ ಆಪ್ ಲಭ್ಯವಿದೆ.
 
2013 ರಲ್ಲಿ ಶೋಟೊ ಆಪ್ ನ್ನು ತಯಾರಿಸಲಾಗಿತ್ತು. 2015 ರ ಜೂನ್ 26 ರಿಂದ ಶೋಟೊ ಆಪ್ ಯುಎನ್ ಫೌಂಡೇಶನ್ ನ ಸಹಭಾಗಿತ್ವ ಹೊಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com