ನವದೆಹಲಿ: ಹುಣ್ಣಿಮೆಯ ದಿನವಾದ ಇಂದು ಚಂದ್ರ ಸಾಮನ್ಯಕ್ಕಿಂತ ಸಣ್ಣ ಗಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾನೆ.
ಶುಕ್ರವಾರ ಚಂದ್ರ ಎಂದಿಗಿಂತ ಚಿಕ್ಕದಾಗಿ ಗೋಚರಿಸಲಿದ್ದು, ಈ ವಿದ್ಯಮಾನವನ್ನು ಮಿನಿಮೂನ್ ಎನ್ನಲಾಗುತ್ತದೆ.
15 ವರ್ಷಗಳಿಗೊಮ್ಮೆ ಮಾತ್ರ ಚಿಕ್ಕದಾಗಿ ಕಾಣಿಸಲಿರುವ ಚಂದ್ರ ಗುರುವಾರ ರಾತ್ರಿ 9.35ರ ಹೊತ್ತಿಗೆ ಕಕ್ಷೆಯ ತುತ್ತ ತುದಿಯಲ್ಲಿ ಅಂದರೆ 406,350 ಕಿ.ಮೀ ದೂರದಲ್ಲಿ ಗೋಚರಿಸಿದ್ದಾನೆ.
ಶುಕ್ರವಾರ ಬೆಳಗ್ಗೆ 10.55ಕ್ಕೆ ಜರುಗಲಿರುವ ಈ ವಿದ್ಯಮಾನವನ್ನು ಸೂರ್ಯನ ಪ್ರಖರ ಬೆಳಕು ಇಱುವುದರಿದಂ ನೋಡುವುದು ಕಷ್ಟ.
ಸಾಮಾನ್ಯ ದಿನಗಳಲ್ಲಿ ಚಂದ್ರ ಮತ್ತು ಭೂಮಿಯ ನಡುವಣ ಅಂತರ ಸುಮಾರು 3.84 ಲಕ್ಷ ಕಿ.ಮೀ ಇರುತ್ತದೆ. ಆದರೆ, 15 ವರ್ಷಗಳಿಗೊಮ್ಮೆ ಮಾತ್ರ ಚಂದ್ರ ತುಂಬಾ ಕಿರಿದಾಗಿ ಕಾಣಿಸಿಕೊಳ್ಳುತ್ತಾನೆ.
ಮುಂದೆ 2030 ಡಿ.10ರಂದು ಮಾತ್ರ ಮತೇತೆ ಇಂಥ ದೃಶ್ಯ ಆಕಶಾದಲ್ಲಿ ಕಾಣುವುದಕ್ಕೆ ಸಾಧ್ಯ. ಭೂಮಿಗೆ ಚಂದ್ರ ತೀರ ಹತ್ತಿರ ಬಂದಾಗ ಕರೆಯುವ ಸೂಪರ್ ಮೂನ್, ಭೂಮಿಯಿಂದ ತೀರಾ ದೂರ ಹೋದಾಗ ಮಿನಿ ಮೂನ್ ಎಂದು ಕರೆಯಲಾಗುತ್ತದೆ. ಸೂಪರ್ ಮೂನ್ ಗಿಂತ ಮಿನಿಮೂನ್ ಗಾತ್ರ ಶೇ.14ರಷ್ಟು ಚಿಕ್ಕದಾಗಲಿದೆ.