ಗೂಗಲ್ ಕ್ಯಾಲೆಂಡರ್ ಈಗ ನಿಮ್ಮ ಆಫೀಸ್ ಮೀಟಿಂಗ್ ಗಳಿಗೆ ಸಮಯ ಸೂಚಿಸುತ್ತದೆ

ಗೂಗಲ್ ನ ಆನ್ ಲೈನ್ ಕ್ಯಾಲೆಂಡರ್ ನಿಂದ ಜೀವನದ ಪ್ರಮುಖ ಕಾರ್ಯಕ್ರಮಗಳನ್ನು ಈಗ ಕಚೇರಿಗೆ ತೆರಳುವ ಉದ್ಯೋಗಿಗಳಿಗೂ ಉಪಯೋಗವಾಗುವಂತಹ ಫೀಚರ್ ನ್ನು ಒದಗಿಸಿದೆ.
ಗೂಗಲ್ ಕ್ಯಾಲೆಂಡರ್
ಗೂಗಲ್ ಕ್ಯಾಲೆಂಡರ್
Updated on: 

ಕ್ಯಾಲಿಫೋರ್ನಿಯಾ: ಗೂಗಲ್ ನ ಆನ್ ಲೈನ್ ಕ್ಯಾಲೆಂಡರ್ ನಿಂದ ಜೀವನದ ಪ್ರಮುಖ ಕಾರ್ಯಕ್ರಮಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸುಲಭವಾಗಿದ್ದು, ಈಗ ಕಚೇರಿಗೆ ತೆರಳುವ ಉದ್ಯೋಗಿಗಳಿಗೂ ಉಪಯೋಗವಾಗುವಂತಹ ಫೀಚರ್ ನ್ನು  ಒದಗಿಸಿದೆ.

ಕಚೇರಿಯಲ್ಲಿ ನಡೆಯುವ ಸಭೆಗಳನ್ನು ನಿಗದಿಪಡಿಸಲು ಸಹಾಯವಾಗುವ ಗೂಗಲ್ ಕ್ಯಾಲೆಂಡರ್ ಕಾರ್ಯನಿರ್ವಹಿಸಲಿದೆ. ಫೈಂಡ್ ಟೈಮ್ ಎಂಬ ಫೀಚರ್ ನ್ನು ಬಿಡುಗಡೆ ಮಾಡಿರುವ ಗೂಗಲ್, ಕಚೇರಿಯಲ್ಲಿ ಎಲ್ಲಾ ಸಿಬ್ಬಂದಿಗಳು/ ಉದ್ಯೋಗಿಗಳು ಯಾವಾಗ ಬಿಡುವಿದ್ದಾರೆ ಎಂಬುದನ್ನು ತಿಳಿಸಿ ಸಭೆ-ಕಾರ್ಯಕ್ರಮಗಳನ್ನು ನಿಗದಿಪಡಿಸಲು ಸಹಾಯ ಮಾಡಲಿದೆ. ಸಭೆಯಲ್ಲಿ ಭಾಗವಹಿಸಲಿರುವ ಪ್ರತಿಯೊಬ್ಬ ಉದ್ಯೋಗಿಯ ವೇಳಾಪಟ್ಟಿಯನ್ನು ಪರಿಶೀಲಿಸಲಿರುವ ಗೂಗಲ್ ಕ್ಯಾಲೆಂಡರ್ ಎಲ್ಲರೂ ಬಿಡುವಿರುವ ದಿನವನ್ನು ತಿಳಿಸಲಿದೆ. ಗೂಗಲ್ ಕ್ಯಾಲೆಂಡರ್ ಟೈಮ್ ಮ್ಯಾನೇಜ್ ಮೆಂಟ್ ವೆಬ್ ಅಪ್ಲಿಕೇಷನ್ ಹಾಗೂ ಆಪ್ ಆಗಿದ್ದು ಏ.13 ರಿಂದ ಲಭ್ಯವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com