ಗೂಗಲ್.ಕಾಂ ಖರೀದಿಸಿದ್ದ ಸನ್ಮಯ್ ವೇದ್ ಗೆ ರೂ. 8 ಲಕ್ಷ ಪಾವತಿಸಲಿರುವ ಗೂಗಲ್

ಗೂಗಲ್.ಕಾಂ ತಾಣಕ್ಕೆ ಒಂದು ನಿಮಿಷದ ಒಡೆಯನಾಗಿದ್ದ ಸನ್ಮಯ್ ವೇದ್ ಗೆ ಗೂಗಲ್ ಸಂಸ್ಥೆ 8 ಲಕ್ಷ ರೂ ಹಣವನ್ನು ಪಾವತಿ ಮಾಡಿ ಗೂಗಲ್.ಕಾಂ ನನ್ನು ವಾಪಸ್ ಪಡೆಯಲು ಮುಂದಾಗಿದೆ.
ಗೂಗಲ್.ಕಾಂ (ಸಂಗ್ರಹ ಚಿತ್ರ)
ಗೂಗಲ್.ಕಾಂ (ಸಂಗ್ರಹ ಚಿತ್ರ)
Updated on: 

ನ್ಯೂಯಾರ್ಕ್: ಗೂಗಲ್.ಕಾಂ ತಾಣಕ್ಕೆ ಒಂದು ನಿಮಿಷದ ಒಡೆಯನಾಗಿದ್ದ ಸನ್ಮಯ್ ವೇದ್ ಗೆ ಗೂಗಲ್ ಸಂಸ್ಥೆ 8 ಲಕ್ಷ ರೂ ಹಣವನ್ನು ಪಾವತಿ ಮಾಡಿ ಗೂಗಲ್.ಕಾಂ ನನ್ನು ವಾಪಸ್ ಪಡೆಯಲು ಮುಂದಾಗಿದೆ.
ಸನ್ಮಯ್ ವೇದ್ ನಿಂದ ಗೂಗಲ್ ಡೊಮೇನ್ ವಾಪಸ್ ಪಡೆಯಲು ಈ ಮೊದಲು 4 ರೂಪಾಯಿ ಪಾವತಿ ಮಾಡುವುದಕ್ಕೆ ಗೂಗಲ್ ಒಪ್ಪಿಗೆ ನೀಡಿತ್ತು. ತನಗೆ ಬಂದ 4 ಲಕ್ಷ ರೂ (6006 .13 ಡಾಲರ್) ಹಣವನ್ನು ಸಮಾಜ ಸೇವೆಗೆ ದೇಣಿಗೆಯಾಗಿ ನೀಡುವುದಕ್ಕೆ ಸನ್ಮಯ್ ವೇದ ನಿರ್ಧರಿಸಿದ್ದರು. ಈ ನಿರ್ಧಾರ ಖಚಿತವಾಗುತ್ತಿದ್ದಂತೆ ಗೂಗಲ್ ತಾನು ಪಾವತಿ ಮಾಡುವ ಮೊತ್ತವನ್ನು ದುಪ್ಪಟ್ಟುಗೊಳಿಸಿದೆ.
ಭಾರತದ 18 ರಾಜ್ಯಗಳಲ್ಲಿ 404 ಉಚಿತ ಶಾಲೆಗಳನ್ನು ನಡೆಸುವ ಮೂಲಕ, ಗ್ರಾಮೀಣ ಭಾಗದಲ್ಲಿ  39 ,000 ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡುತ್ತಿರುವ ಆರ್ಟ್ ಆಫ್ ಲಿವಿಂಗ್ ಇಂಡಿಯಾ ಫೌಂಡೇಶನ್ ಗೆ ಗೂಗಲ್ ನಿಂದ ಬರುವ ಹಣವನ್ನು ದೇಣಿಗೆ ನೀಡಬೇಕು ಎಂದು ಸನ್ಮಯ್ ವೇದ್ ನಿರ್ಧರಿಸಿದ್ದಾರೆ.  
2015 ರ ಸೆಪ್ಟೆಂಬರ್ ನಲ್ಲಿ ಗೂಗಲ್ ಸಂಸ್ಥೆಯ ಮಾಜಿ ಉದ್ಯೋಗಿಯಾಗಿದ್ದ ಸನ್ಮಯ್ ವೇದ್ ಗೂಗಲ್ ಡೊಮೇನ್ಸ್ ಎಂಬ ವೆಬ್ ಸೈಟ್ ಖರೀದಿ ತಾಣದಲ್ಲಿ ಹುಡುಕುತ್ತಿದ್ದಾಗ ಗೂಗಲ್.ಕಾಂ ಎಂಬ ಡೊಮೇನ್ ನನ್ನು 12 ಡಾಲರ್ ಗೆ ಖರೀದಿಸಿದ್ದರು. ಖರೀದಿ ಪ್ರಕ್ರಿಯೆ ನಂತರ ಡೊಮೇನ್ ಮಾರಾಟವನ್ನು ಗೂಗಲ್ ರದ್ದುಗೊಳಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com