ವಾಟ್ಸ್ ಆಪ್ ನ ಬಳಕೆದಾರರಿಂದ ಪ್ರತಿದಿನಕ್ಕೆ 100 ಮಿಲಿಯನ್ ಕರೆಗಳು!

ಕಳೆದ ವರ್ಷ ಏಪ್ರಿಲ್ ನಲ್ಲಿ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ನೀಡಿದ್ದ ಕರೆ ಮಾಡುವ ಸೌಲಭ್ಯ ನಿರೀಕ್ಷೆಗೂ ಮೀರಿದ ಜನಪ್ರಿಯತೆ ಗಳಿಸಿದ್ದು, ಪ್ರತಿ ಕ್ಷಣಕ್ಕೆ 1,100 ಕರೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ವಾಟ್ಸ್ ಆಪ್ ನ ಬಳಕೆದಾರರಿಂದ ಪ್ರತಿದಿನಕ್ಕೆ 100 ಮಿಲಿಯನ್ ಕರೆಗಳು!
Updated on

ನವದೆಹಲಿ: ಕಳೆದ ವರ್ಷ ಏಪ್ರಿಲ್ ನಲ್ಲಿ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ನೀಡಿದ್ದ ಕರೆ ಮಾಡುವ ಸೌಲಭ್ಯ ನಿರೀಕ್ಷೆಗೂ ಮೀರಿದ ಜನಪ್ರಿಯತೆ ಗಳಿಸಿದ್ದು, ಪ್ರತಿ ಕ್ಷಣಕ್ಕೆ 1,100 ಕರೆಗಳನ್ನು ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.

ವಾಟ್ಸ್ ಆಪ್ ಮೊದಲ ಬಾರಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಕರೆ ಮಾಡುವ ಸೌಲಭ್ಯ ನೀಡಿತ್ತು, ನಂತರ ಬ್ಲಾಕ್ ಬೆರ್ರಿ, ಐಫೋನ್, ವಿಂಡೋಸ್ ಫೋನ್ ಗಳಿಗೆ ಈ ಸೌಲಭ್ಯಗಳನ್ನು ಒದಗಿಸಿತ್ತು. ವಾಟ್ಸ್ ಆಪ್ ಮಾಹಿತಿ ಪ್ರಕಾರ ವಾಟ್ಸ್ ಆಪ್ ಮೂಲಕ ಗ್ರಾಹಕರು ಪ್ರತಿ ದಿನಕ್ಕೆ 100 ಮಿಲಿಯನ್ ಕರೆಗಳನ್ನು ಮಾಡುತ್ತಿರುತ್ತಾರೆ ಎಂದು ತಿಳಿದುಬಂದಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್ ಮತ್ತಷ್ಟು ಜನಪ್ರಿಯಗೊಳ್ಳಲು ಹೊಸ ಆಯ್ಕೆಗಳನ್ನು ಪರಿಚಯಿಸುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com