ವಾಷಿಂಗ್ಟನ್: ಹತ್ತರ ಹರೆಯದ ಬಾಲಕ ಇನ್‌ಸ್ಟಾಗ್ರಾಂನಲ್ಲಿರುವ 'ಬಗ್' ಪತ್ತೆ ಹಚ್ಚಿದ್ದು, ಈತನಿಗೆ ಫೇಸ್‌ಬುಕ್ ಕಂಪನಿ 10,000 ಡಾಲರ್ ( ಸರಿಸುಮಾರು 6.6 ಲಕ್ಷ ರು) ಬಹುಮಾನ ನೀಡಿದೆ.
ಫೇಸ್ ಬುಕ್‌ನಲ್ಲಿಯೂ ಇದೇ ಕಂಪನಿಯ ಇನ್ನಿತರ ವೆಬ್‌ಸೈಟ್‌ಗಳಲ್ಲಿಯೂ ಇರುವ ಸುರಕ್ಷಾ ಲೋಪವನ್ನು ತೋರಿಸಿಕೊಡುವವರಿಗೆ ನೀಡುವ ಬಹುಮಾನ ನೀಡುವ
ಬಿಗ್ ಬೌಂಡಿ ಎಂಬ ಯೋಜನೆಯನ್ನು ಪ್ರಸ್ತುತ ಕಂಪನಿ 5 ವರ್ಷಗಳ ಹಿಂದೆ ಆರಂಭಿಸಿತ್ತು. ಅತೀ ಹೆಚ್ಚು ಬಾರಿ ಸುರಕ್ಷಾ ಲೋಪಗಳನ್ನು ಪತ್ತೆ ಹಚ್ಚಿದವರು ಭಾರತೀಯರೇ ಆಗಿದ್ದರು.
ಈ ರೀತಿ ಬಹುಮಾನ ಪಡೆದವರಲ್ಲಿ ಅತೀ ಕಿರಿಯವ ಎಂದರೆ ಫಿನ್ ಲ್ಯಾಂಡ್‌ನ ಜಾನ್ ಎಂಬಾತ. ಇನ್‌ಸ್ಟಾಗ್ರಾಂನಲ್ಲಿ ಲಾಗಿನ್ ಮಾಡದೆಯೆ ಅಲ್ಲಿರುವ ಕಾಮೆಂಟ್‌ಗಳನ್ನು, ಫೋಟೋ ಶೀರ್ಷಿಕೆಗಳನ್ನು ಡಿಲೀಟ್ ಮಾಡಲು ಸಾಧ್ಯವಾಗುವಂತೆ ಮಾಡುವ ಬಗ್‌ನ್ನು ಜಾನ್ ಎಂಬ ಹತ್ತರ ಹರೆಯದ ಈ ಪೋರ ಪತ್ತೆ ಹಚ್ಚಿದ್ದಾನೆ.