ಎಚ್ಚರ: ವಾಟ್ಸಪ್ ವಿಡಿಯೋ ಕಾಲಿಂಗ್ಗಾಗಿ ಈ ಲಿಂಕ್ ಕ್ಲಿಕ್ಕಿಸಿದರೆ ತೊಂದರೆಗೆ ಸಿಲುಕುತ್ತಿರೀ!

ವಾಟ್ಸಪ್ ವಿಡಿಯೋ ಕಾಲಿಂಗ್ ಸದ್ಯ ಹಾಟ್ ಟಾಪಿಕ್ ಆಗಿದ್ದು ಎಲ್ಲರು ವಾಟ್ಸಪ್ ವಿಡಿಯೋ ಕಾಲಿಂಗ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಮುಗಿಬಿಳುತ್ತಿದ್ದಾರೆ. ಆದರೆ ಸದ್ಯ...
ವಾಟ್ಸಪ್
ವಾಟ್ಸಪ್
ನವದೆಹಲಿ: ವಾಟ್ಸಪ್ ವಿಡಿಯೋ ಕಾಲಿಂಗ್ ಸದ್ಯ ಹಾಟ್ ಟಾಪಿಕ್ ಆಗಿದ್ದು ಎಲ್ಲರು ವಾಟ್ಸಪ್ ವಿಡಿಯೋ ಕಾಲಿಂಗ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಮುಗಿಬಿಳುತ್ತಿದ್ದಾರೆ. ಆದರೆ ಸದ್ಯ ವಾಟ್ಸಪ್ ತನ್ನ ವಿಡಿಯೋ ಕಾಲಿಂಗ್ ಆವೃತ್ತಿಯನ್ನು ಪರಿಶೀಲನೆಯ ಹಂತದಲ್ಲಿ ಇಟ್ಟಿದ್ದು ಅದನ್ನು ಬಳಕೆದಾರರಿಗೆ ಇನ್ನು ಮುಕ್ತಗೊಳಿಸಿಲ್ಲ. 
ಇದನ್ನೇ ಬಂಡವಾಳ ಮಾಡಿಕೊಂಡಿರುವ ಹ್ಯಾಕರ್ ಗಳು ವಾಟ್ಸಪ್ ನಲ್ಲಿ ಮೇಸೆಜ್ ಮೂಲಕ ವಾಟ್ಸಪ್ ವಿಡಿಯೋ ಕಾಲಿಂಗ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಎಂಬ ಸಂದೇಶವನ್ನು ಹರಡುತ್ತಿದ್ದಾರೆ. ಈ ಲಿಂಕ್ ಅನ್ನು ಕ್ಲಿಕ್ಕಿಸಿದರೇ ನೀವು ತೊಂದರೆಗೆ ಸಿಲುಕಲಿದ್ದೀರಾ. ಈ ಲಿಂಕ್ ಓಪನ್ ಮಾಡಿದಾಗ ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನೀಡಬೇಕಾಗುತ್ತದೆ. ಅದೇ ಆದರೆ ನಿಮ್ಮ ಮೊಬೈಲ್ ಹ್ಯಾಕ್ ಆಗುವುದು ಖಂಡಿತ. ನಂತರ ನೀವು ಮಾಡುವ ಪ್ರತಿಯೊಂದು ಮೇಸೆಜ್ ಮತ್ತು ವಿಡಿಯೋಗಳು ಹಾಗೂ ಫೋನಿನಲ್ಲಿರುವ ಪ್ರತಿಯೊಂದು ಮಾಹಿತಿ ಹ್ಯಾಕರ್ಸ್ ಗಳ ಪಾಲಾಗುತ್ತದೆ. 
ಈ ಮೋಸದ ಜಾಲಕ್ಕೆ ಸಿಲುಕಬೇಡಿ. ಯಾಕೆಂದರೆ ವಾಟ್ಸಪ್ ಯಾವುದಾದರು ಅಪ್ಡೇಟ್ ಬಿಟ್ಟರೆ ಅನ್ನು ಯಾವುದೇ ರೀತಿಯ ಮೇಸೆಜ್ ಮೂಲಕ ಕಳುಹಿಸುವುದಿಲ್ಲ. ಬದಲಿಗೆ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮಾತ್ರ ಇರುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com