ವಿಜ್ಞಾನಿಗಳಿಂದ ಪ್ಲಾಸ್ಟಿಕ್ ತಿನ್ನುವ ಎಂಜೈಮ್ ನ ಆಕಸ್ಮಿಕ ಸಂಶೋಧನೆ!

ವಿಜ್ಞಾನಿಗಳು ಆಕಸ್ಮಿಕವಾಗಿ ಪ್ಲಾಸ್ಟಿಕ್-ಈಟಿಂಗ್( ಪ್ಲಾಸ್ಟಿಕ್-ಸೇವಿಸುವ) ಎಂಜೈಮ್ ನ್ನು ಅಭಿವೃದ್ಧಿಗೊಳಿಸಿದ್ದಾರೆ.
ವಿಜ್ಞಾನಿಳಿಂದ ಪ್ಲಾಸ್ಟಿಕ್ ತಿನ್ನುವ ಎಂಜೈಮ್ ನ ಆಕಸ್ಮಿಕ ಸಂಶೋಧನೆ!
ವಿಜ್ಞಾನಿಳಿಂದ ಪ್ಲಾಸ್ಟಿಕ್ ತಿನ್ನುವ ಎಂಜೈಮ್ ನ ಆಕಸ್ಮಿಕ ಸಂಶೋಧನೆ!
Updated on: 
ವಾಷಿಂಗ್ ಟನ್: ವಿಜ್ಞಾನದ ಲೋಕವೇ ಒಂದು ಅಚ್ಚರಿ. ವಿಜ್ಞಾನಿಗಳು ಯಾವುದಕ್ಕೋ ಹುಡುಕುತ್ತಿರುತ್ತಾರೆ. ಆಕಸ್ಮಿಕವಾಗಿ ಮತ್ಯಾವುದೋ ಸಿಕ್ಕಿರುತ್ತದೆ. ಆ ಆಕಸ್ಮಿಕವಾಗಿ ಸಿಕ್ಕಿದ್ದು, ಸಂಶೋಧಿಸಿದ್ದು ಮತ್ಯಾವುದಕ್ಕೋ ಉಪಯೋಗಕ್ಕೆ ಬರುತ್ತದೆ. ಆದ ಕಾರಣವೇ  ವಿಜ್ಞಾನಿಗಳ ಸಂಶೋಧನೆಯ ಬೈ-ಪ್ರಾಡಕ್ಟ್ (ಉಪ ಉತ್ಪನ್ನ) ಆಗಿ ನಾವು ಅನೇಕ ಉಪಕರಣಗಳನ್ನು ಬಳಸುತ್ತಿದ್ದೇವೆ. 
ಈಗ ಇಂತಹದ್ದೇ ಬೆಳವಣಿಗೆಯೊಂದು ಬ್ರಿಟನ್ ನ ಪೋರ್ಟ್ಸ್ಮೌತ್ ವಿಶ್ವವಿದ್ಯಾನಿಲಯದಲ್ಲಿ ನಡೆದಿದ್ದು,  ವಿಜ್ಞಾನಿಗಳು ಆಕಸ್ಮಿಕವಾಗಿ ಪ್ಲಾಸ್ಟಿಕ್-ಈಟಿಂಗ್( ಪ್ಲಾಸ್ಟಿಕ್-ಸೇವಿಸುವ) ಎಂಜೈಮ್ ನ್ನು ಅಭಿವೃದ್ಧಿಗೊಳಿಸಿದ್ದಾರೆ. 
ಬ್ರಿಟನ್ ನ ಪೋರ್ಟ್ಸ್ಮೌತ್ ವಿಶ್ವವಿದ್ಯಾನಿಲಯ ಹಾಗೂ ಅಮೆರಿಕದ ನವೀಕರಿಸಬಹುದಾದ ಶಕ್ತಿಯ ರಾಷ್ಟ್ರೀಯ ಪ್ರಯೋಗಾಲಯ ತ್ಯಾಜ್ಯ ಮರುಬಳಕೆ ಕೇಂದ್ರದಲ್ಲಿ ಪತ್ತೆಯಾದ ನೈಸರ್ಗಿಕ ಎಂಜೈಮ್ ನ ರಚನೆಯನ್ನು ಅಧ್ಯಯನ ಮಾಡುತ್ತಿದ್ದರು. ಇದರ ಬಗ್ಗೆ ಅಧ್ಯಯನ ಮಾಡುತ್ತಿದ್ದ ವಿಜ್ಞಾನಿಗಳು ಆಕಸ್ಮಿಕವೆಂಬಂತೆ ಪ್ಲಾಸ್ಟಿಕ್ ನ್ನು ತಿನ್ನುವ ಎಂಜೈಮ್ ನ್ನು ಅಭಿವೃದ್ಧಿಪಡಿಸಿದ್ದಾರೆ. 
ಪ್ರೋಟೀನ್ ಇಂಜಿನಿಯರಿಂಗ್ ನಲ್ಲಿ ಸಹಾಯ ಪಡೆದುಕೊಳ್ಳುವ ಉದ್ದೇಶದಿಂದ ತ್ಯಾಜ್ಯ ಮರುಬಳಕೆ ಕೇಂದ್ರದಲ್ಲಿ ಪತ್ತೆಯಾದ ನೈಸರ್ಗಿಕ ಎಂಜೈಮ್ ನ ರಚನೆಯ ಬಗ್ಗೆ ಅಧ್ಯಯನ ನಡೆಸುತ್ತಿದ್ದೆವು, ಆದರೆ ಕೊನೆಗೆ ಪ್ಲಾಸ್ಟಿಕ್ ತಿನ್ನುವ ಎಂಜೈಮ್ ನ್ನು ಪತ್ತೆ ಮಾಡಿದ್ದೇವೆ ಎಂದು ಎನ್ಆರ್ ಇಎಲ್ ನ ಮುಖ್ಯ ಸಂಶೋಧಕ ಗ್ರೆಗ್ ಬೆಕ್ಹ್ಯಾಮ್ ಹೇಳಿದ್ದಾರೆ. 
ಪಿಇಟಿ ಯಿಂದ ನಿರ್ಮಿಸಲಾಗಿರುವ ಪ್ಲಾಸ್ಟಿಕ್ ಬಾಟೆಲ್ ಗಳ ಮರುಬಳಕೆಯಲ್ಲಿ ಈ ಸಂಶೋಧನೆ ಸಹಕಾರಿಯಾಗಲಿದೆ ಎಂದು  ಬ್ರಿಟನ್ ನ ಪೋರ್ಟ್ಸ್ಮೌತ್ ವಿಶ್ವವಿದ್ಯಾನಿಲಯ ಹೇಳಿದೆ. ಪಾಲಿಥಿಲೀನ್ ಫ್ಯುರಾಂಡಿಕಾರ್ಬಾಕ್ಸಿಲೇಟ್, ಅಥವಾ ಪಿಇಎಫ್ ಕರಗಿ ವಿಘಟನೆಯಾಗುವುದಕ್ಕೆ ಹೊಸದಾಗಿ ಸಂಶೋಧನೆಯಾಗಿರುವ ಎಂಜೈಮ್ ಅತ್ಯಂತ ಸಹಕಾರಿ ಎಂದು ಪೋರ್ಟ್ಸ್ಮೌತ್ ವಿಶ್ವವಿದ್ಯಾನಿಲಯ ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com