ವಾಟ್ಸ್ ಆಪ್ ಸೌಲಭ್ಯ ಹೊಂದಿರುವ ಜಿಯೋ ಫೋನ್ 2 ಬೆಲೆ ಕೇವಲ 3 ಸಾವಿರ: ವೈಶಿಷ್ಟ್ಯಗಳೇನು ಗೊತ್ತೇ?

ರಿಲಾಯನ್ಸ್ ಸಂಸ್ಥೆ ತನ್ನ 41 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಲಾದ ಜಿಯೋಫೋನ್ 2 ಕಳೆದ ವರ್ಷಕ್ಕಿಂತ ಭಿನ್ನವಾದ ವಿನ್ಯಾಸ, ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, 2,999 ರೂಪಾಯಿಗಳಿಗೆ
ಜಿಯೋ ಫೋನ್ 2
ಜಿಯೋ ಫೋನ್ 2
ರಿಲಾಯನ್ಸ್ ಸಂಸ್ಥೆ ತನ್ನ 41 ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಘೋಷಿಸಲಾದ ಜಿಯೋಫೋನ್ 2 ಕಳೆದ ವರ್ಷಕ್ಕಿಂತ ಭಿನ್ನವಾದ ವಿನ್ಯಾಸ, ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದ್ದು, 2,999 ರೂಪಾಯಿಗಳಿಗೆ ಲಭ್ಯವಾಗಲಿದೆ. 
ಹೊಸ ಜಿಯೋಫೋನ್ 2 ರಲ್ಲಿ ವಾಟ್ಸ್ ಆಪ್ ಹಾಗೂ ಯೂಟ್ಯೂಬ್ ಆಯ್ಕೆಗಳನ್ನು ಹೊಂದಿದ್ದು, ಬ್ಲ್ಯಾಕ್ ಬೆರಿ ಮಾದರಿಯ ವಿನ್ಯಾಸ, ಕೀ ಪ್ಯಾಡ್ ನ್ನು ಹೊಂದಿದೆ. ಆಗಸ್ಟ್ 15 ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದ್ದು, 2,999 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಇದೇ ವೇಳೆ ಘೋಷಿಸಲಾಗಿರುವ ಜಿಯೋಫೋನ್ ಮಾನ್ಸೂನ್ ಹಂಗಾಮ ಆಫರ್ ಮೂಲಕ ಈಗಿರುವ ಜಿಯೋ ಫೋನ್ ಬಳಕೆದಾರರು 501 ರೂಪಾಯಿ  ನೀಡಿ ಹ್ಯಾಂಡ್ ಸೆಟ್ ನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಈ ಆಫರ್ ಜುಲೈ.21 ರಿಂದ ಜಾರಿಗೆ ಬರಲಿದೆ.
ಜಿಯೋ 2 ವಿಶೇಷತೆಗಳು 
ಡ್ಯುಯಲ್ ಸಿಮ್
2.4 ಇಂಚ್ ಕ್ಯುವಿಜಿಎ ಡಿಸ್ಲ್ಪೇ 
ಕೆಎಐ ಆಪರೇಟಿಂಗ್ ಸಿಸ್ಟನ್ 
512 ಎಂಬಿ ರ್ಯಾಮ್ 
4 ಜಿಬಿ ಮೆಮೋರಿ (128 ಜಿಬಿ ವರೆಗೂ ವಿಸ್ತರಿಸಲು ಅವಕಾಶ)  
2 ಎಂಪಿ ಕ್ಯಾಮರಾ, ವಿಜಿಎ ಫ್ರಂಟ್ ಕ್ಯಾಮರಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com