ಜು.17 ರಿಂದ ಯಾಹೂ ಮೆಸೆಂಜರ್ ಸ್ಥಗಿತ

ಯಾಹೂ ಸಂಸ್ಥೆ ತನ್ನ ಮೆಸೆಂಜರ್ ಆಪ್ ನ್ನು ಜುಲೈ.17 ರಿಂದ ಸ್ಥಗಿತಗೊಳಿಸಲಿದೆ.
ಜು.17  ರಿಂದ ಯಾಹೂ ಮೆಸೆಂಜರ್ ಸ್ಥಗಿತ
ಜು.17 ರಿಂದ ಯಾಹೂ ಮೆಸೆಂಜರ್ ಸ್ಥಗಿತ
ಕ್ಯಾಲಿಫೋರ್ನಿಯಾ: ಯಾಹೂ ಸಂಸ್ಥೆ ತನ್ನ ಮೆಸೆಂಜರ್ ಆಪ್ ನ್ನು ಜುಲೈ.17 ರಿಂದ ಸ್ಥಗಿತಗೊಳಿಸಲಿದೆ. 
ಇನ್ನೂ ಯಾಹೂ ಸಂಸ್ಥೆಯ ಮೆಸೆಂಜರ್ ನ್ನು ಬಳಕೆ ಮಾಡುತ್ತಿರುವ ಗ್ರಾಹಕರ ಐಡಿಯನ್ನು ಹೊಸ ಮೆಸೇಜಿಂಗ್ ಆಪ್ ಸ್ಕ್ವಿರಿಲ್ ಗೆ ಸ್ಥಳಾಂತರಿಸಲಾಗುವುದು ಎಂದು ಯಾಹೂ ತಿಳಿಸಿದೆ.  ಬಳಕೆದಾರರು ತಮ್ಮ ಚಾಟ್ ಹಿಸ್ಟರಿಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಸಂಶ್ಥೆ 6 ತಿಂಗಳ ಕಾಲಾವಕಾಶ ನೀಡಿದೆ. 
ಯಾಹೂ ಸಂಸ್ಥೆ ಕಳೆದ ತಿಂಗಳಿನಿಂದ ಸ್ಕ್ವಿರಿಲ್ ಆಪ್ ನ್ನು ಪರೀಕ್ಷೆ ಮಾಡುತ್ತಿದ್ದು, ಯಾಹೂ ಮೆಸೆಂಜರ್ ಸ್ಥಗಿತಗೊಂಡ ನಂತರ ಸ್ಕ್ವಿರಿಲ್ ಆಪ್ ಅಸ್ತಿತ್ವಕ್ಕೆ ಬರಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com