ಟೊರೊಂಟೊ: ಹೊಸ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಸಹಾಯದಿಂದ ಚಂದ್ರನಲ್ಲಿರುವ ಕುಳಿಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಲೂನಾರ್ ಮ್ಯಾಪಿಂಗ್ ತಂತ್ರಜ್ಞಾನದ ಸಹಾಯದಿಂದ ಕೆಲವೇ ಗಂಟೆಗಳಲ್ಲಿ 6,000 ಹೊಸ ಕುಳಿಗಳನ್ನು ಪತ್ತೆ ಮಾಡಲಾಗಿದ್ದು, ಕೆಲವು ಬಿಲಿಯನ್ ವರ್ಷಗಳಷ್ಟು ಹಳೆಯದಾದ ಕುಳಿಗಳು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇಕಾರ್ಸ್ ಜರ್ನಲ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು ಈ ಹಿಂದೆ ಪತ್ತೆಯಾಗದ 6,000 ಕುಳಿಗಳನ್ನು ವಿಜ್ಞಾನಿಗಳು ಈಗ ಪತ್ತೆ ಮಾಡಿದ್ದಾರೆ. ಇದೇ ತಂತ್ರಜ್ಞಾನದ ಸಹಾಯದಿಂದ ಬುಧ ಗ್ರಹದಲ್ಲಿನ ಕುಳಿಗಳನ್ನೂ ಸಹ ಪತ್ತೆ ಮಾಡಲಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.