ಇನ್ನು ನ್ಯೂಹಾರಿಜನ್ ಉಪಗ್ರಹ ಅತ್ಯಂತ ಪ್ರಬಲ ಸಿಗ್ನಲ್ ವ್ಯವಸ್ಥೆ ಹೊಂದಿರುವ ಉಪಗ್ರಹ ಎಂದು ಹೇಳಲಾಗುತ್ತಿದ್ದು, ಅತ್ಯಂತ ವೇಗದಲ್ಲಿ ಇದು ಸಿಗ್ನಲ್ ರವಾನಿಸುತ್ತದೆ ಮತ್ತು ಸ್ವೀಕರಿಸುತ್ತದೆ. ಉಪಗ್ರಹದ ಸಿಗ್ನಲ್ ವೇಗ ಗಂಟೆಗೆ ಸುಮಾರು 33 ಸಾವಿರ ಮೈಲುಗಳಷ್ಟಿದೆ. ಉಪಗ್ರಹದಿಂದ ಅಲ್ಟಿಮಾ ಠ್ಯುಲಿ 2,200 ಮೈಲು ದೂರದಲ್ಲಿದ್ದು, ಇದೇ ಕಾರಣಕ್ಕೆ ಈ ಉಪಗ್ರಹದ ಮೇಲೆ ನಾಸಾ ವಿಜ್ಞಾನಿಗಳು ತುಂಬಾ ನಿರೀಕ್ಷೆ ಹೊಂದಿದ್ದಾರೆ. ಉಪಗ್ರಹದಿಂದ ರವಾನಿಸುವ ಸಿಗ್ನಲ್ ಅಲ್ಟಿಮಾ ಠ್ಯುಲಿಗೆ ತಲುಪಬಹುದು ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ.