ವರ್ಷದ ಮೊದಲ ಚಂದ್ರ ಗ್ರಹಣ ನಾಳೆ ಗೋಚರ, ಕುತೂಹಲಕರ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ ಭಾರತ

ಈ ವರ್ಷದ ಮೊದಲ ಚಂದ್ರಗ್ರಹಣ ಶುಕ್ರವಾರ (ನಾಳೆ) ಸಂಭವಿಸಲಿದ್ದು, ಭಾರತ, ಆಫ್ರಿಕಾ, ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಇದು ಗೋಚರವಾಗಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ:  ಈ ವರ್ಷದ ಮೊದಲ ಚಂದ್ರಗ್ರಹಣ ಶುಕ್ರವಾರ (ನಾಳೆ) ಸಂಭವಿಸಲಿದ್ದು, ಭಾರತ, ಆಫ್ರಿಕಾ, ಯುರೋಪ್ ಮತ್ತು ಆಸ್ಟ್ರೇಲಿಯಾದಲ್ಲಿ ಇದು ಗೋಚರವಾಗಲಿದೆ.

ನಾಳೆ ರಾತ್ರಿ 10ಗಂಟೆಯ ನಂತರ ಚಂದ್ರಗ್ರಹಣ ಸಂಭವಿಸಲಿದೆ. ರಾತ್ರಿ 10.37ಕ್ಕೆ ಶುರುವಾಗಿ ಜ.11ಮುಂಜಾನೆ 2.42ರವರೆಗೆ ಗ್ರಹಣ ಜರುಗಲಿದೆ .

ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ಬಂದಾಗ ಈ ಗ್ರಹಣ ಸಂಭವಿಸಲಿದೆ, ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಈ ಸಂದರ್ಭದಲ್ಲಿ ಚಂದ್ರ ಸಾಮಾನ್ಯಕ್ಕಿಂತ ಹೆಚ್ಚು ದೊಡ್ಡದಾಗಿ ಗೋಚರವಾಗಲಿದೆ. 

ಸೂರ್ಯಗ್ರಹಣದಂತೆ ಚಂದ್ರಗ್ರಹಣವೂ ಒಂದು ಬಾಹ್ಯಾಕಾಶ ವಿಸ್ಮಯವಾಗಿದ್ದು ಚಂದ್ರಗ್ರಹಣವನ್ನು ಬರಿಗಣ್ಣಿನಿಂದ ಕಾಣುವುದಕ್ಕೆ ಯಾವ ಅಡಚಣೆ ಇಲ್ಲ. 

ಈ ಕ್ಯಾಲೆಂಡರ್ ವರ್ಷದಲ್ಲಿ ನಾಳೆಯದೂ ಸೇರಿದಂತೆ ಒಟ್ಟು ನಾಲ್ಕು ಚಂದ್ರಗ್ರಹಣ ನಡೆಯಲಿದೆ. ನಾಳೆನ ಬಳಿಕ  ಜೂನ್​ 5, ಜುಲೈ 5 ಹಾಗೂ ನವೆಂಬರ್​ 30ಕ್ಕೆ ಮುಂದಿನ ಮೂರು ಚಂದ್ರಗ್ರಹಣಗಳು ಸಂಭವಿಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com