ಸುಮಾರು ಎರಡು ಗಂಟೆಗಳಿಂದ ಸ್ಥಗಿತಗೊಂಡಿದ್ದ WhatsApp ಸೇವೆ ಪುನರಾರಂಭ

ಸರ್ವರ್ ಸಮಸ್ಯೆಯಿಂದಾಗಿ ಸುಮಾರು ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಪ್ರಮುಖ ಮೆಸೇಜಿಂಗ್ ಆ್ಯಪ್ ವಾಟ್ಸಾಪ್‌ ಸೇವೆಗಳು ಪುನರಾರಂಭವಾಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಲಂಡನ್: ಸರ್ವರ್ ಸಮಸ್ಯೆಯಿಂದಾಗಿ ಸುಮಾರು ಎರಡು ಗಂಟೆಗಳ ಕಾಲ ಸ್ಥಗಿತಗೊಂಡಿದ್ದ ಪ್ರಮುಖ ಮೆಸೇಜಿಂಗ್ ಆ್ಯಪ್ ವಾಟ್ಸಾಪ್‌ ಸೇವೆಗಳು ಪುನರಾರಂಭವಾಗಿವೆ.

ಮಂಗಳವಾರ ಬೆಳಗ್ಗೆ ಸುಮಾರು ಎರಡು ಗಂಟೆಗಳ ಕಾಲ ಯಾವುದೇ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ಜನ ಪರದಾಡುವಂತಾಗಿತ್ತು. 12:30 ರ ಸುಮಾರಿಗೆ ಸ್ಥಗಿತಗೊಂಡಿದ್ದ ವಾಟ್ಸಾಪ್ ಸೇವೆಗಳು ಮಧ್ಯಾಹ್ನ 2 ರ ನಂತರ ಸೇವೆಗಳು ಪುನರಾರಂಭವಾದವು. ವಾಟ್ಸಾಪ್ ಸೇವೆಗಳನ್ನು ಪುನಃಸ್ಥಾಪಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

"ಕೆಲವರು ಪ್ರಸ್ತುತ ಸಂದೇಶಗಳನ್ನು ಕಳುಹಿಸುವಲ್ಲಿ ತೊಂದರೆ ಎದುರಿಸುತ್ತಿರುವುದಾಗಿ ನಮಗೆ ತಿಳಿದಿದೆ ಮತ್ತು ಸಾಧ್ಯವಾದಷ್ಟು ಬೇಗ ಎಲ್ಲರಿಗೂ WhatsApp ಅನ್ನು ಮರುಸ್ಥಾಪಿಸಲು ನಾವು ಕೆಲಸ ಮಾಡುತ್ತಿದ್ದೇವೆ" ಎಂದು ಮೆಟಾ ಕಂಪನಿಯ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡೌನ್‌ಡಿಟೆಕ್ಟರ್ ಪ್ರಕಾರ, ಶೇ. 69 ರಷ್ಟು ಬಳಕೆದಾರರು ಈ ಸಮಸ್ಯೆಯನ್ನು ಎದುರಿಸಿದ್ದು, ಚೆನ್ನೈ, ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ವಾಟ್ಸಾಪ್ ಬಳಕೆದಾರರಿಗೆ ಅಡಚಣೆಯಾಗಿತ್ತು ಎಂದು ಹೇಳಿದೆ.

ಇಟಲಿ ಮತ್ತು ಟರ್ಕಿಯ ಸಾಮಾಜಿಕ ಮಾಧ್ಯಮ ಬಳಕೆದಾರರು ಸಹ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗದಿರುವ ಬಗ್ಗೆ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com