ಪ್ರತಿಯೊಬ್ಬ ಉದ್ಯೋಗಸ್ಥ ಮಹಿಳೆಯರಂತೆ ದೇವಕಿ ಸಹ ಪ್ರತಿದಿನ ಬೆಳಿಗ್ಗೆ ಆರಕ್ಕೆ ಅನೆ ಬಿಡುತ್ತಾರೆ. ಬೆಳಗಿನ ಉಪಹಾರ, ಮದ್ಯಾಹ್ನದ ಊಟವನ್ನು ಬುತ್ತಿಯಲ್ಲಿ ತುಂಬಿಕೊಂಡು ರಾಜಾಜಿನಗರ, ಮಂಜುನಾಥ ನಗರದಲ್ಲಿನ ವೆಸ್ಟ್ ಆಫ್ ಕಾರ್ಡ್ ರೋಡ್ ನಲ್ಲಿನ ತಮ್ಮ ಅಂಗಡಿಗೆ ಆಗಮಿಸುತ್ತಾರೆ. ಚಿಕ್ಕ ಅಂಗಡಿಗೆ ವಿದ್ಯುತ್ ಸಂಪರ್ಕವಿಲ್ಲದ ಕಾರಣ ಸಂಜೆ ಆರು ಗಂಟೆಗೆಲ್ಲಾ ಆಕೆ ಬಾಗಿಲು ಮುಚ್ಚಿ ಮನೆಗೆ ತೆರಳುತ್ತಾರೆ. ಪ್ರತಿದಿನ ಸರಾಸರಿ 400 ರು. ವ್ಯಾಪಾರ ಮಾಡುವುದಾಗಿ ಆಕೆ ಪತ್ರಿಕೆಗೆ ತಿಳಿಸಿದ್ದಾರೆ.