ಕ್ರೀಡೆ

ಬಾಂಗ್ಲಾದೇಶ ಮಣಿಸಿದ ಭಾರತ

Published On :

ನವದೆಹಲಿ: ಡ್ಯಾನಿಶ್ ಮುಜ್ತಾಬಾ ಅವರ ಎರಡು ಗೋಲುಗಳ ನೆರವಿನಿಂದಾಗಿ, ಭಾರತ ಪುರುಷರ ಹಾಕಿ ತಂಡ, ಭಾನುವಾರ ನಡೆದ ವಿಶ್ವ ಹಾಕಿ ಲೀಗ್ (ಎರಡನೇ ಸುತ್ತು) ಪಂದ್ಯದಲ್ಲಿ ಬಲಿಷ್ಠ ಬಾಂಗ್ಲಾದೇಶವನ್ನು 5-1 ಗೋಲುಗಳಿಂದ ಸೋಲಿಸಿತು.
 ಈ ಜಯದ ಮೂಲಕ, ಭಾರತ ಪುರುಷರ ತಂಡ ವಿಶ್ವ ಹಾಕಿ ಲೀಗ್‌ನ ಮೂರನೇ ಸುತ್ತಿನ ಪಂದ್ಯಾವಳಿಯಲ್ಲಿ ಆಡುವ ಅರ್ಹತೆಯನ್ನು ಪಡೆದುಕೊಂಡಿದೆ.
ಭಾರತದ ಪರವಾಗಿ ಡ್ಯಾನಿಶ್ ಅವಕು ಪಂದ್ಯದ 15ನೇ ಹಾಗೂ 64ನೇ ನಿಮಿಷದಲ್ಲಿ ಗೋಲು ಗಳಿಸಿದರೆ, ರೂಪಿಂದರ್ ಸಿಂಗ್ (32ನೇ ನಿಮಿಷ), ಆಕಾಶ್ ದೀಪ್ ಸಿಂಗ್ (50ನೇ ನಿಮಿಷ) ಹಾಗೂ ಮಾಲಕ್ ಸಿಂಗ್ (58ನೇ ನಿಮಿಷ) ಅವರು ಗೋಲು ಗಳಿಸಿದರು.
ಪಂದ್ಯದ ಆರಂಭದಲ್ಲಿ ಬಾಂಗ್ಲಾದೇಶ ತನ್ನ ಗೋಲು ಖಾತೆ ತೆರೆದಿತ್ತು. 5ನೇ ನಿಮಿಷದಲ್ಲಿ ಆ ತಂಡದ ಮಮುನೂರ್ ರಹಮಾನ್ ಚಯಾನ್ ಅವರು ಗೋಲು ಗಳಿಸಿದರು.

3ನೇ ಸುತ್ತಿಗೆ ಭಾರತ ಮಹಿಳೆಯರು
ನವದೆಹಲಿ:
ಶುಕ್ರವಾರ ನಡೆದ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯಲ್ಲಿ ತನ್ನ ಪಾಲಿನ ಕೊನೆಯ ರೌಂಡ್-ರಾಬಿನ್ ಪಂದ್ಯವನ್ನಾಡಿದ ಭಾರತದ ವನಿತೆಯರು, ರಷ್ಯಾ ತಂಡವನ್ನು 1-0 ಅಂತರದಲ್ಲಿ ಸೋಲಿಸಿತು.
ಇತ್ತಂಡಗಳ ನಡುವೆ ತೀವ್ರ ಹಣಾಹಣಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತದ ರಾಣಿ ರಾಮ್‌ಪಾಲ್ ಅವರು 51ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಈ ಗೋಲ್‌ನ ಸಹಾಯದಿಂದ ಭಾರತ ತಂಡ, ರಷ್ಯಾದ ವಿರುದ್ಧ ಜಯ ಸಾಧಿಸಿತು.
ಈ ಜಯದ ಮೂಲಕ, ಭಾರತ ಮಹಿಳೆಯರು ವಿಶ್ವ ಹಾಕಿ ಲೀಗ್‌ನ ಮೂರನೇ ಸುತ್ತಿನ ಪಂದ್ಯಾವಳಿಯಲ್ಲಿ ಆಡುವ ಅರ್ಹತೆ ಪಡೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.