ಬೋಪಣ್ಣ- ಫ್ಲೆಮಿಂಗ್ ಜೋಡಿಗೆ ಫ್ರಾನ್ಸ್ ಎಟಿಪಿ ಪ್ರಶಸ್ತಿ
ಮಾರ್ಸಿಲ್ (ಫ್ರಾನ್ಸ್): ಭಾರತದ ಟೆನಿಸ್ ತಾರೆ ರೋಹನ್ ಬೋಪಣ್ಣ ಅವರು ಋತುವಿನ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಬೋಪಣ್ಣ ಮತ್ತು ಇಂಗ್ಲೆಂಡ್ನ ಕಾಲಿನ್ ಫ್ಲೆಮಿಂಗ್ ಜೋಡಿ ಫ್ರಾನ್ಸ್ನಲ್ಲಿ ನಡೆದ ಎಟಿಪಿ ಒಪನ್ 13 ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.
ಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕ ಪಡೆದಿದ್ದ ಭಾರತ- ಇಂಗ್ಲೆಂಡ್ ಜೋಡಿ, ಅಗ್ರ ಶ್ರೇಯಾಂಕ ಪಡೆದಿದ್ದ ಐಸಾಮ್ ಉಲ್ ಹಕ್ ಖುರೇಶಿ ಮತ್ತು ಜೀಲ್ ಜೂಲಿಯನ್ ರೋಜರ್ ಜೋಡಿಯನ್ನು 6-4, 7-6 (3) ನೇರ ಸೆಟ್ಗಳ ಅಂತರದಿಂದ ಪರಾಭವಗೊಳಿಸಿತು. ತಮ್ಮ ಎಂದಿನ ಜತೆಯಾಟಗಾರ ರಾಜೀವ್ ರಾಮ್ ಅವರು ಅಲಭ್ಯರಾದ ಹಿನ್ನೆಲೆಯಲ್ಲಿ ಬೋಪಣ್ಣ ಅವರು, ಫ್ಲೆಮಿಂಗ್ ಅವರೊಂದಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಪಂದ್ಯದಲ್ಲಿ ದೊರೆತ ಎಲ್ಲ ನಾಲ್ಕೂ ಬ್ರೇಕ್ ಪಾಯಿಂಟ್ಗಳನ್ನು ಸುದುಪಯೋಗಪಡಿಸಿಕೊಳ್ಳುವಲ್ಲಿ ಭಾರತ- ಅಮೆರಿಕ ಜೋಡಿ ಯಶಸ್ವಿಯಾಯಿತು. ಇಂಡೋನೇಷ್ಯಾ ವಿರುದ್ಧ ಭಾರತ ಡೇವಿಸ್ ಕಪ್ ತಂಡಕ್ಕೆ ನಿರ್ಲಕ್ಷಿಸಲಾಗಿರುವ ಬೋಪಣ್ಣ ಅವರಿಗೆ ಇದು ವೃತ್ತಿ ಜೀವನದಲ್ಲಿ 8ನೇ ಎಟಿಪಿ ಪ್ರಶಸ್ತಿಯಾಗಿದೆ. ಕಳೆದ ವರ್ಷ ಬೋಪಣ್ಣ ಅವರು ಪ್ಯಾರೀಸ್ ಮಾಸ್ಟರ್ ಮತ್ತು ದುಬೈ ಪಂದ್ಯಾವಳಿಗಳಲ್ಲಿ, ಮಹೇಶ್ ಭೂಪತಿ ಅವರೊಂದಿಗೆ ಎರಡು ಪ್ರಶಸ್ತಿ ಗೆದ್ದುಕೊಂಡಿದ್ದರು. ಬೋಪಣ್ಣ ಮತ್ತು ಫ್ಲೆಮಿಂಗ್ ರು. 20 ಲಕ್ಷ ಬಹುಮಾನ ಮೊತ್ತವನ್ನು ಹಂಚಿಕೊಂಡರು. ಅಲ್ಲದೆ 250 ರ್ಯಾಂಕಿಂಗ್ ಪಾಯಿಂಟ್ಗಳನ್ನು ಪಡೆದುಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

