ಧ್ಯಾನ್ಚಂದ್ ಮೈದಾನಕ್ಕೆ ಕುಡುಕರ ಕಾವಲು!
ನವದೆಹಲಿ: ವಿಶ್ವ ಹಾಕಿ ಲೀಗ್ ಪಂದ್ಯಾವಳಿಯ ದ್ವಿತೀಯ ಸುತ್ತಿನ ಪಂದ್ಯಗಳು ನಡೆದ ರಾಜಧಾನಿಯಲ್ಲಿನ ಮೇಜರ್ ಧ್ಯಾನ್ಚಂದ್ ಸ್ಟೇಡಿಯಂಗೆ ಕುಡಕರೇ ಕಾವಲುಗಾರರಂತೆ. ಭಾನುವಾರ ಪಂದ್ಯಾವಳಿ ಅಂತ್ಯಗೊಂಡ ನಂತರ ಹಾಕಿ ಇಂಡಿಯಾ ಅಧಿಕಾರಿಗಳು ದೂರು ದಾಖಲಿಸಿದ ನಂತರವೇ ಈ ಸಂಗತಿ ಬಹಿರಂಗವಾಗಿದೆ.
ಹಾಕಿ ಇಂಡಿಯಾ ಅಧಿಕಾರಿಗಳು ನೀಡಿದ ದೂರಿನ ಹಿನ್ನೆಲೆಯಲ್ಲಿ ಕಾವಲುಗಾರರ ಮೇಲ್ವಿಚಾರಕನನ್ನೇ ಪೊಲೀಸರು ಬಂಧಿಸಿದ್ದಾರೆ. ಆದರೆ, ನಂತರ ಆತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾನೆ.
ಮೇಜರ್ ಧ್ಯಾನ್ಚಂದ್ ಸ್ಟೇಡಿಯಂನ್ನು ರಾಷ್ಟ್ರೀಯ ಮೈದಾನ ಎಂದು ಸಹ ಕರೆಯಲಾಗುತ್ತದೆ. ಸ್ಟೇಡಿಯಂಗೆ ಹಾಕಲಾಗಿರುವ ಖಾಸಗಿ ಭದ್ರತಾ ಸಂಸ್ಥೆಯ ಕಾವಲುಗಾರರ ಮಲ್ವಿಚಾರಕ ಸನ್ಹಸಾರ್ ಪವಾರ್ ಅವರನ್ನು ಕಳೆದ ರಾತ್ರಿ ದೆಹಲಿಯ ಟಿಳಕ ಮಾರ್ಗ್ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದರು.
'ಪವಾರ್ ಹಲವಾರು ತಪ್ಪುಗಳನ್ನು ಮಾಡಿದ್ದಾನೆ. ಕರ್ತವ್ಯದಲ್ಲಿದ್ದಾಗಲೇ ಸದಾ ಮದ್ಯಪಾನ ಮಾಡುತ್ತಾನೆ. ಹಾಕಿ ಇಂಡಿಯಾ ಲೀಗ್ನ ಕೊನೆಯ ದಿನ ಪಂದ್ಯಾವಳಿಗೆ ಹಲವಾರು ಸಾಧನಗಳನ್ನು ಹೊತ್ತು ಬಂದಿದ್ದ ವಾಹನವನ್ನು ಒಳಗೆ ಬಿಡಲು ಒಪ್ಪದ ಪವಾರ್, ಹಣ ಅಥವಾ ಮದ್ಯವನ್ನು ನೀಡಿದರೆ ಮಾತ್ರ ವಾಹನಕ್ಕೆ ಅನುಮತಿ ನೀಡುತ್ತೇನೆ ಎಂದು ಒತ್ತಾಯಿಸಿದ. ಅಲ್ಲದೆ ಹಲವಾರು ಉನ್ನತ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ' ಎಂದು ಹಾಕಿ ಇಂಡಿಯಾ ಮೂಲಗಳು ಹೇಳಿವೆ.
ಐತಿಹಾಸಿಕ ಸ್ಥಳವಾದ ಧ್ಯಾನ್ಚಂದ್ ಸ್ಟೇಡಿಯಂಗೆ ಇಂತಹ ಕಾವಲುಗಾರರನ್ನು ನೇಮಿಸಿದರೆ, ಇತರ ಸ್ಟೇಡಿಯಂಗಳ ಪಾಡೇನು?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

