ಕ್ರೀಡೆ

ಏಷ್ಯಾ ಪ್ರತಿನಿಧಿಸುವ ಫೆನ್ಸಿಂಗ್ ತಂಡ

Published On :

ನವದೆಹಲಿ: ತಮ್ಮಷ್ಟಕ್ಕೆ ತಾವೇ ಸಮಸ್ಯೆಗೆ ಪರಿಹಾರ ಕಂಡುಕೊಂಡ ಭಾರತ ಕಿರಿಯರ ಫೆನ್ಸಿಂಗ್ ತಂಡ ಬರುವ ತಿಂಗಳು ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಏಷ್ಯನ್ ಜೂನಿಯರ್ ಫೆನ್ಸಿಂಗ್ ಪಂದ್ಯಾವಳಿಗೆ ಏಷ್ಯಾ ಫೆನ್ಸಿಂಗ್ ಕನ್ಫೆಡರೇಷನ್ (ಎಫ್‌ಸಿಎ) ಪ್ರತಿನಿಧಿಸಲು ತೀರ್ಮಾನಿಸಿದೆ.
ಹೀಗಾಗಿ ಕ್ರೀಡಾ ಇತಿಹಾಸದಲ್ಲಿ ದೇಶದ ತಂಡವೊಂದು ಏಷ್ಯಾವನ್ನು ಪ್ರತಿನಿಧಿಸುತ್ತಿರುವುದೇ ದೇಶದ ಗೌರವಕ್ಕೆ ಧಕ್ಕೆ ಉಂಟುಮಾಡಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ (ಐಒಸಿ) ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ (ಐಎಒ) ಮೇಲೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ, ಭಾರತ ಫೆನ್ಸಿಂಗ್ ಸಂಸ್ಥೆಯನ್ನೂ ಅಂತಾರಾಷ್ಟ್ರೀಯ ಫೆನ್ಸಿಂಗ್ ಫೆಡರೇಷನ್ ನಿಷೇಧಿಸಿದೆ. ಹೀಗಾಗಿ ತಂಡ ಪಂದ್ಯಾವಳಿಯಲ್ಲಿ ಭಾಗವಹಿಸಲು ಅನುಮತಿ ಸಿಕ್ಕಿರಲಿಲ್ಲ. ಆದರೆ, ಏಷ್ಯನ್ ಕನ್ಫೆಡರೇಷನ್ ಪ್ರತಿನಿಧಿಸುವ ಮೂಲಕ ಪಂದ್ಯಾವಳಿಯಲ್ಲಿ ಭಾಗವಹಿಸಲು ಭಾರತ ತಂಡಕ್ಕೆ ಇದ್ದ ಒಂದೇ ಒಂದು ಅವಕಾಶವಾಗಿತ್ತು. ಹೀಗಾಗಿ ಭಾರತ ಫೆನ್ಸಿಂಗ್ ತಂಡ ಏಷ್ಯಾವನ್ನು ಪ್ರತಿನಿಧಿಸಲು ತೀರ್ಮಾನಿಸಿದೆ.
ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅನುಮಾನವಾಗುವುದರೊಂದಿಗೆ ಭಾರತ ಫೆನ್ಸಿಂಗ್ ತಂಡಕ್ಕೆ ಸರ್ಕಾರ ಹಣಕಾಸಿನ ನೆರವು ನೀಡುವ ಬಗ್ಗೆ ಸಹ ಸಂದೇಹ ಮೂಡಿತ್ತು. ಅಲ್ಲದೆ ರಾಷ್ಟ್ರೀಯ ಫೆಡೇಷನ್ ಸಹ ಹಲವಾರು ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿತ್ತು.
ಹೀಗಾಗಿ ಹಲವಾರು ದಿನಗಳಿಂದ ವೈಯಕ್ತಿಕ ಪ್ರಾಯೋಜಕರನ್ನು ಹುಡುಕಿಕೊಳ್ಳಲು ಆಟಗಾರರು ಯತ್ನಿಸುತ್ತಿದ್ದರು. ತಮ್ಮ ಸ್ವಂತ ಹಣವನ್ನೂ ಖರ್ಚು ಮಾಡಿಕೊಂಡು ಪಂದ್ಯಾವಳಿಗೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದಾರೆ. ತಂಡ ಸೂಕ್ತ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದ ನಂತರ ಪಂದ್ಯಾವಳಿಯಲ್ಲಿ ಪ್ರವೇಶ ಪಡೆದಿದ್ದೇವೆ ಎಂದು ಭಾರತ ಫೆನ್ಸಿಂಗ್ ಸಂಸ್ಥೆ ಕಾರ್ಯದರ್ಶಿ ಸಂಜಯ್ ಪ್ರಧಾನ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.