ಕ್ರೀಡೆ

ಬಾಕ್ಸಿಂಗ್ ಫೆಡರೇಷನ್ ನಿರಾಳ

ಬಾಕ್ಸಿಂಗ್  ಫೆಡರೇಷನ್ ನಿರಾಳ
Published On :

ನವದೆಹಲಿ: ಭಾರತೀಯ ಬಾಕ್ಸರ್‌ಗಳ ಅಮಾನತು ತೆಗೆದು ಹಾಕಿದ್ದ, ಅಂತಾರಾಷ್ಟ್ರೀ ಬಾಕ್ಸಿಂಗ್ ಸಂಸ್ಥೆ, ಈಗ ಭಾರತೀಯ ಬಾಕ್ಸಿಂಗ್ ಫೆಡರೇಷನ್ (ಐಎಬಿಎಫ್) ತಿದ್ದುಪಡಿ ಮಾಡಿರುವ ಸಂವಿಧಾಕ್ಕೆ ಮಾನ್ಯತೆ ನೀಡಿದೆ.
'ಷರಿಷ್ಕೃತಗೊಳಿಸಲಾದ ಭಾರತೀಯ ಬಾಕ್ಸಿಂಗ್ ಸಂಸ್ಥೆಯ ಸಂವಿಧಾನಕ್ಕೆ ಮಾನ್ಯತೆ ನೀಡಲಾಗಿದೆ. ತಿದ್ದುಪಡಿ ಮಾಡಲಾದ ಸಂವಿಧಾನದ ಒಂದು ಪ್ರತಿಯನ್ನು ಕೇಂದ್ರ ಕ್ರೀಡಾ ಸಚಿವಾಲಯಕ್ಕೂ ಕಳುಹಿಸಿಕೊಟ್ಟಿದ್ದೇವೆ' ಎಂದು ಐಎಬಿಎಫ್ ಪ್ರಧಾನ ಕಾರ್ಯದರ್ಶಿ ರಾಜೇಶ್ ಭಂಡಾರಿ ಸುದ್ದಿ ಸಂಸ್ಥೆಯೊಂದಕ್ಕೆ ಹೇಳಿದ್ದಾರೆ.
ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ ತನ್ನ ಚುನಾವಣೆಯಲ್ಲಿ (ಅವ್ಯವಹಾರ ಮಾಡಿರುವ ಸಾಧ್ಯತೆ) ಇರುವ ಹಿನ್ನೆಲೆಯಲ್ಲಿ ಅದರ ಮೇಲೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಂಸ್ಥೆ ನಿಷೇಧ ಹೇರಿತ್ತು. ಇದರಿಂದ ಕಳೆದ ವರ್ಷ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ಐಎಬಿಎಫ್ ಅನ್ನು ಅಮಾನತುಗೊಳಿಸಿತ್ತು. ನಂತರ ಅದರ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಆದೇಶ ನೀಡಿತ್ತು.
'ನಾವು ವೃತ್ತಿಪರ ಮಾರ್ಗಸೂಚಿಗಳನ್ನು ಹೊಂದಿದ ಬಾಕ್ಸಿಂಗ್ ಸಂಸ್ಥೆಯನ್ನು ಹೊಂದಿರದ ಕಾರಣ, ಅಂತಾರಾಷ್ಟ್ರೀಯ ಬಾಕ್ಸಿಂಗ್ ಫೆಡೇರಷನ್ ಅಮಾನತುಗೊಳಿಸಿತ್ತು. ಅಲ್ಲದೇ ಕೇಂದ್ರ ಕ್ರೀಡಾ ಸಚಿವಾಲಯ ಜಾರಿಗೆ ತಂದಿರುವ ನೀತಿ ಸಂಹಿತೆಯ ವಯೋವುತಿ ಮತ್ತು ಅಧಿಕಾರದ ಅವಧಿಯನ್ನೂ ಅಳವಡಿಸಿಕೊಂಡಿರಲಿಲ್ಲ' ಎಂದು ಭಂಡಾರಿ ಹೇಳಿದ್ದಾರೆ.
ಭಾರತೀಯ ಬಾಕ್ಸಿಂಗ್ ಸಂಸ್ಥೆಯನ್ನು ಕೇಂದ್ರ ಕ್ರೀಡಾ ಸಚಿವಾಲಯ ಸಹ ಅಮಾನುತುಗೊಳಿಸಿತ್ತು. ನಂತರ ಹೊಸದಾಗಿ ಚುನಾವಣೆ ನಡೆಸಲು ಆದೇಶಿಸಿತ್ತು. 'ನಾವು ಹೊಸದಾಗಿ ಚುನಾವಣೆ ನಡೆಸಿಲ್ಲ. ಆದರೆ, ಸಚಿವಾಲದ ಆಕ್ಷೇಪಣೆಗಳಿಗೆ ಸೂಕ್ತ ಉತ್ತರ ನೀಡಿದ್ದೇವೆ. ನಾವು ಏನು ತಪ್ಪೆಸಗಿದ್ದೇವೆ ಎಂಬುದನ್ನು ಸಚಿವಾಲಯ ನಮಗೆ ತಿಳಿಸಬೇಕು' ಎಂದು ಅವರು ಕೇಳಿದ್ದಾರೆ.
'ಈಗ ಸಚಿವಾಲಯ ಸಹ ಅಮಾನುತು ತೆಗೆದು ಹಾಕಬೇಕು ಎಂದು ನಾವು ಕೇಳುತ್ತೇವೆ. ಕ್ರೀಡಾ ನೀತಿ ಸಂಹಿತೆಯನ್ನು ಅಳವಡಿಸಿಕೊಂಡಿರುವ ನಾವು, ನಮಗೆ ನೀಡಲಾಗಿದ್ದ ಸಲಹೆಗಳನ್ನು ಪಾಲಿಸಿದ್ದೇವೆ. ಕಳೆದ ಬಾರಿ ಸಚಿವಾಲಯದ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಚರ್ಚಿಸಿದ ಎಲ್ಲ ಸಲಹೆಗಳನ್ನೂ ಪೂರೈಸಿದ್ದೇವೆ. ಹೀಗಾಗಿ ಸಚಿವಾಲಯ ಈಗ ತನ್ನ ಮಾತನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಭಂಡಾರಿ ಹೇಳಿದ್ದಾರೆ.
ಏತನ್ಮಧ್ಯೆ, ಮಾರ್ಚ್ 10ರಿಂದ ಫಿಲಿಪಿನ್ಸ್‌ನಲ್ಲಿ ನಡೆಯಲಿರುವ ಏಷ್ಯನ್ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ ವಿಭಾಗದಲ್ಲಿ ಭಾಗವಹಿಸಲು ಆಹ್ವಾನ ಬಂದಿದೆ.
'ತರಬೇತುದಾರರು ಮತ್ತು ಬಾಕ್ಸರ್‌ಗಳು ಮಾತ್ರ ಪಂದ್ಯಾವಳಿಗೆ ತೆರಳಬಹುದು. ಒಂದು ಒಳ್ಳೆಯ ಬೆಳವಣಿಗೆ ಎಂದರೆ ಬಾಕ್ಸರ್‌ಗಳಿಗೆ ಇನ್ನು ಮುಂದೆ ಯಾವುದೇ ತೊಂದರೆ ಇಲ್ಲ. ನಮ್ಮ ಬಾಕ್ಸರ್‌ಗಳು ಈಗ ನಿರಾಳವಾಗಿ ಮುಂದುವರಿಯಬಹುದು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.