ಸಚಿನ್ ತೆಂಡೂಲ್ಕರ್ ದಾಖಲೆ ಅಳಿಸಿದ ಧೋನಿ

ಚೆನ್ನೈ: ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ತಂಡದ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸುವ ಮೂಲಕ ಮಹೇಂದ್ರ ಸಿಂಗ್ ಧೋನಿ ಹೊಸ ದಾಖಲೆ ನಿರ್ಮಿಸಿದರು. ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ 224 ರನ್ ಗಳಿಸುವ ಮೂಲಕ ಧೋನಿ ಈ ಹೊಸ ದಾಖಲೆ ಬರೆದರು.
ಭಾನುವಾರವೇ ದ್ವಿಶತಕ ಪೂರೈಸಿದ್ದ ಧೋನಿ ಅವರು, ಸೋಮವಾರ ಸಚಿನ್ ತೆಂಡೂಲ್ಕರ್ ಭಾರತ ತಂಡದ ನಾಯಕನಾಗಿ ನ್ಯೂಜಿಲೆಂಡ್ ವಿರುದ್ಧ 1999ರಲ್ಲಿ ಅಹ್ಮದಾಬಾದ್ನಲ್ಲಿ ಗಳಿಸಿದ್ದ 217 ರನ್ಗಳ ಮೊತ್ತ ದಾಟಿದರು. 144ನೇ ಓವರ್ನಲ್ಲಿ ನಥಾನ್ ಲಯಾನ್ ಎಸೆತದಲ್ಲಿ ಸಿಕ್ಸರ್ ಬಾರಿಸುವ ಮೂಲಕ ಧೋನಿ 217 ರನ್ ಗಳಿಸಿದರು. ನಂತರ ಒಂದು ರನ್ ಮಾಡುವ ಮೂಲಕ ದಾಖಲೆ ಮುರಿದರು. ಆದರೆ, ವಿಶ್ವದಲ್ಲಿ ತಂಡವೊಂದರ ನಾಯಕನಾಗಿ ಆ್ಯಂಡಿ ಫ್ಲ್ಲವರ್ ಗಳಿಸಿದ ಮೊತ್ತವನ್ನು ಅಳಿಸಿ ಹಾಕಲು ಧೋನಿಗೆ ಇನ್ನೂ 8 ರನ್ ಕಡಿಮೆಯಾಯಿತು.
ಹೆಚ್ಚು ಮೊತ್ತ ಗಳಿಸಿದ ಭಾರತದ ನಾಯಕರು
224 ಮಹೇಂದ್ರ ಸಿಂಗ್ ಧೋನಿ ಆಸ್ಟ್ರೇಲಿಯಾ ವಿರುದ್ಧ (ಚೆನ್ನೈ)
217 ಸಚಿನ್ ತೆಂಡೂಲ್ಕರ್ ನ್ಯೂಜಿಲೆಂಡ್ ವಿರುದ್ಧ (ಅಹ್ಮದಾಬಾದ್)
205 ಸುನಿಲ್ ಗವಾಸ್ಕರ್ ವೆಸ್ಟ್ ಇಂಡೀಸ್ ವಿರುದ್ಧ (ಮುಂಬೈ)
203 ಮನ್ಸೂಲರ್ ಅಲಿ ಖಾನ್ ಪಟೌಡಿ ಇಂಗ್ಲೆಂಡ್ ವಿರುದ್ಧ (ದೆಹಲಿ)
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


