ಸರವಣ ಶತಕ: ವಿಂಡೀಸ್ಗೆ ಸರಣಿ
ಸೇಂಟ್ ಜಾರ್ಜ್ (ಗ್ರೇನಾಡಾ): ರಾಮ್ನರೇಶ್ ಸರವಣ (ಅಜೇಯ 120) ಶತಕದ ನೆರವಿನೊಂದಿಗೆ ವೆಸ್ಟ್ ಇಂಡೀಸ್, ಜಿಂಬಾಬ್ವೆ ವಿರುದ್ಧನ ನಡೆದ 2ನೇ ಏಕದಿನ ಪಂದ್ಯದಲ್ಲಿ 7 ವಿಕೆಟ್ ಅಂತರದಿಂದ ಜಯ ಕಂಡುಕೊಂಡಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದಿಂದ ವಿಂಡೀಸ್ ಸರಣಿ ಗೆದ್ದುಕೊಂಡಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ 8 ವಿಕೆಟ್ ಕಳೆದುಕೊಂಡು 273 ರನ್ಗಳ ಸವಾಲೊಡ್ಡಿತ್ತು. ನಂತರ ಬ್ಯಾಟಿಂಗ್ಗೆ ಇಳಿದ ವಿಂಡೀಸ್ 32ರ ಹರೆಯದ ಸರವಣ, ಅವರ ಶತಕದ ನೆರವಿನೊಂದಿಗೆ ಇನ್ನೂ 6 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ನಷ್ಟಕ್ಕೆ 274 ರನ್ ಪೇರಿಸಿ ಜಯ ದಡ ಸೇರಿತು.
53 ರನ್ ಗಳಿಸಿದ್ದಾಗ ರನೌಟ್ ಆಗಿದ್ದ ಸರವಣ ಅಂಪೈರ್ಗಳ ತಪ್ಪಿನಿಂದ ಜೀವದಾನ ಪಡೆದರು. ಅಲ್ಲದೆ, ಜಿಂಬಾಬ್ವೆ ಸಹ ಅಂಪೈರ್ ಮೇಲ್ಮನವಿ ಸಲ್ಲಿಸುವ ಅವಕಾಶವನ್ನು ತಪ್ಪಿಸಿಕೊಂಡಿತು. ಹೀಗಾಗಿ ಕಠಿಣ ಸಂದರ್ಭದಲ್ಲಿ ವಿಕೆಟ್ ಉಳಿಸಿಕೊಂಡ ಸರವಣ ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.
ಸರವಣ ಒಂದು ರನ್ಗಾಗಿ ಓಡಿದಾಗ ನಾನ್ಸ್ಟ್ರೈಕ್ನಲ್ಲಿ ಜಿಂಬಾಬ್ವೆಯ ಚಿಭಾಬು ನೇರವಾಗಿ ಸ್ಟಂಪ್ಗೆ ಚೆಂಡನ್ನು ಎಸೆದಿದ್ದರು. ಆದರೆ, ಅಂಪೈರ್ ಪೀಟರ್ ನೆರೋ ಅವರು ಜಿಂಬಾಬ್ವೆ ಮನವಿಗೆ ಔಟ್ ನೀಡಲಿಲ್ಲ. ಟಿವಿ ಅಂಪೈರ್ಗಳ ತೀರ್ಮಾನ ಕೇಳದ ಸರವಣಗೆ ಜೀವದಾನ ನೀಡಿದ್ದು ಜಿಂಬಾಬ್ವೆಗೆ ಅಡ್ಡಿಯಾಗಿ ಪರಿಣಮಿಸಿತು.
ಟಿವಿ ರೀಪ್ಲೆಯಲ್ಲಿ ಸರವಣ ರನೌಟ್ ಆಗಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ, ಜಿಂಬಾಬ್ವೆ ಆಟಗಾರರು, ಅಂಪೈರ್ ಮೇಲ್ಮನವಿ ಉಪಯೋಗ ಪಡೆಯದಿರುವುದು, ಅಂಪೈರ್ ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳಲು ಸೂಕ್ತ ಕಾರಣವಾಯಿತು.
ತಮ್ಮ 13 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಎರಡನೇ ಬಾರಿಗೆ ಆರಂಭಿಕ ಆಟಗಾರನಾಗಿ ಅಂಗಣಕ್ಕಿಳಿದ ಸರವಣ ಮೊತ್ತದಲ್ಲಿ 2 ಸಿಕ್ಸರ್ ಮತ್ತು 9 ಬೌಂಡರಿಗಳು ಸೇರಿದ್ದವು. ಕೀರಣ್ ಪಾವೆಲ್ (57) ಅವರೊಂದಿಗೆ ಅವರೊಂದಿಗೆ ಮೊದಲ ವಿಕೆಟ್ಗೆ 111 ರನ್ ಗಳಿಸಲು ಸರವಣ ಕಾರಣರಾದರು.
ಹ್ಯಾಮಿಲ್ಟನ್ ಮಸಕಾಜಾ ಬೌಲಿಂಗ್ನಲ್ಲಿ ಪಾವೆಲ್ ಕ್ಯಾಚ್ ನೀಡಿದ ನಂತರ ಬಂದ ಡಾರೇನ್ ಬ್ರಾವೋ 26ನೇ ಓವರ್ನಲ್ಲಿ 2 ಎಸೆತಗಳನ್ನು ಎದುರಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ನರ್ಸಿಂಗ್ ಡಿಯೋನಾರಾಯಣ (42) ರನೌಟ್ ಆದರು. ಆಗ ಕ್ರೀಸ್ಗಿಳಿದ ಕೀರನ್ ಪೊಲಾರ್ಡ್ 20 ಎಸೆತಗಳಲ್ಲಿ ಅಜೇಯ 41 ರನ್ಗ ಳಿಸುವ ಮೂಲಕ ತಂಡ ಜಯ ಸಾಧಿಸಲು ನೆರವಾದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಜಿಂಬಾಬ್ವೆ ಪರ, ಕ್ರೈಗೆ ಎರ್ವಿನ್ (80), ಮಸಕಾಜಾ (60) ಹಾಗೂ ಆರಂಭಿಕ ಆಟಗಾರ ವೂಸಿ ಸಿಬಾಂದಾ (51) ಅಗ್ರ ಕ್ರಮಾಂಕದಲ್ಲಿ ಅರ್ಧ ಶತಕ ದಾಖಲಿಸುವ ಮೂಲಕ ತಂಡಕ್ಕೆ ಆಶ್ರಯವಾಗಿದ್ದರು.
ವೆಸ್ಟ್ ಇಂಡೀಸ್ ಪರ ಉತ್ತಮ ಬೌಲಿಂಗ್ ಪ್ರದರ್ಶಿಸಿದ ಡ್ವೈನ್ ಬ್ರಾವೋ ಅವರು 43 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠಪ್ರಶಸ್ತಿಗೆ ಭಾಜನರಾದರು.
ಸಂಕ್ಷಿಪ್ತ ಸ್ಕೋರ್
ಜಿಂಬಾಬ್ವೆ 273/8 (50 ಓವರ್)
ಎರ್ವಿನ್ 80 (85)
ಮಸಕಾಜಾ 60 (84)
ಬೌಲಿಂಗ್: ಡ್ವೈನ್ ಬ್ರಾವೋ 43/6, ನಾರಾಯಣ 55/1
ವೆಸ್ಟ್ ಇಂಡೀಸ್ 274/3
ಸರವಣ ಅಜೇಯ 120 (143), ಪಾವೆಲ್ 57 (81)
ಬೌಲಿಂಗ್: ಮಸಕಾಜಾ 27/2, ಉತ್ಸೇಯಾ 54/0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

