ಮೆಲ್ಬರ್ನ್: ಭಾರತದ ಪ್ರಶಸ್ತಿ ಆಸೆಯನ್ನು ಜೀವಂತವಾಗಿ ಉಳಿಸಿದ್ದ ಸಾನಿಯಾ ಮಿರ್ಜಾ ಮತ್ತು ಮಹೇಶ್ ಭೂಪತಿ, ಆಸ್ಟ್ರೇಲಿಯಾ ಓಪನ್ ಕ್ವಾರ್ಟರ್‌ಫೈನಲ್‌ನ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೋಲನುಭವಿಸಿದರು. ಇದರೊಂದಿಗೆ ಪಂದ್ಯಾವಳಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಮೂರನೇ ಶ್ರೇಯಾಂಕ ಪಡೆದಿದ್ದ ಭಾರತದ ಸಾನಿಯಾ ಮತ್ತು ಅಮೆರಿಕದ ಜತೆಯಾಟಗಾರ ಬಾಬ್ ಬ್ರಿಯಾನ್ ಜೋಡಿ, ಶ್ರೇಯಾಂಕ ರಹೀತ ಜಕ್ ಗಣರಾಜ್ಯದ ಲೂಸಿಯಾ ರಾಡೆಕಾ ಮತ್ತು ಫ್ರಂಟಿಸೆಕಾ ಸೆರ್ಮಾಕ್ ಜೋಡಿ ವಿರುದ್ಧ 5-7, 4-6 ನೇರ ಸೆಟ್‌ಗಳ ಅಂತರದಿಂದ ಪರಾಭವ ಹೊಂದಿತು. ಇನ್ನು 5ನೇ ಶ್ರೇಯಾಂಕ ಪಡೆದಿದ್ದ ಭಾರತದ ಮಹೇಶ್ ಭೂಪತಿ ಮತ್ತು ರಷ್ಯಾದ ನಾಡಿಯಾ ಪೆಟ್ರೋವಾ ಜೋಡಿ, ಆಸ್ಟ್ರೇಲಿಯಾದ ಜರ್ಮೈಲ್ ಗಜ್ಡೋಸೋವಾ ಮತ್ತು ಮ್ಯಾಥ್ಯೂ ಎಬ್ಡನ್ ಜೋಡಿ ವಿರುದ್ಧ 3-5, 6-3, 11-13 ಸೆಟ್‌ಗಳಿಂದ ಪರಾಭವ ಹೊಂದಿತು. ಭಾರತದ ಇತರ ಆಟಗಾರರಾದ ಲಿಯಾಂಡರ್ ಪೇಸ್ ಮತ್ತು ರೋಹನ್ ಬೋಪಣ್ಣ ಅವರು ಮಿಶ್ರ ಡಬಲ್ಸ್ ವಿಭಾಗದಲ್ಲಿ ಈಗಾಗಲೇ ಸೋಲನುಭವಿಸಿದ್ದಾರೆ. ಹೀಗಾಗಿ ಭಾರತದ ಸವಾಲು ಅಂತ್ಯಗೊಂಡಂತಾಗಿದೆ.