ವಿಕಾಂಜಿ: ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಇಲ್ಲಿ ನಡೆಯುತ್ತಿರುವ 75ನೇ ಟಾಟಾ ಸ್ಟೀಲ್ ಚೆಸ್ ಪಂದ್ಯಾವಳಿಯ 10ನೇ ಸುತ್ತಿನ ಪಂದ್ಯವನ್ನು ಡ್ರಾ ಮಾಡಿಕೊಂಡಿದ್ದಾರೆ. ಆನಂದ್ ಈ ಪಂದ್ಯದಲ್ಲಿ ತಮ್ಮ ಪ್ರತಿಸ್ಫರ್ಧಿ ರಷ್ಯಾದ ಸೆರ್ಗೆ ಕರ್ಜಕಿನ್ ಅವರಿಂದ ಪ್ರಬಲ ಪೈಪೋಟಿ ಎದುರಾದ ಕಾರಣ ಆನಂದ್ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಂತಾಯಿತು. ಪಂದ್ಯದ ಕೊನೆಯವರೆಗೂ ಪಾನ್‌ಗಳನ್ನು ಹೆಚ್ಚು ರಕ್ಷಣಾತ್ಮಕವಾಗಿ ಚಲಿಸಿದ ಕರ್ಜಕಿನ್ ಆನಂದ್‌ಗೆ ಹೆಚ್ಚಿನ ಅವಕಾಶ ನೀಡಲಿಲ್ಲ. ಈ ಮೂಲಕ ಆನಂದ್ ಅಂಕಪಟ್ಟಿಯಲ್ಲಿ ಅರ್ಮೇನಿಯಾದ ಲೆವೊನ್ ಅರೊನಿಯನ್ ಹಾಗೂ ಅಮೆರಿಕಾದ ಹಿಕರು ನಕಮುರ ಅವರೊಂದಿಗೆ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಇದೇ ವೇಳೆ ಮ್ಯಾಗ್ನಸ್ ಕಾರ್ಲ್‌ಸೆನ್ ತಮ್ಮ ಗೆಲುವಿನ ಯಾತ್ರೆಯನ್ನು ಮುಂದುವರೆಸಿದ್ದಾರೆ. ಕಾರ್ಲ್‌ಸೆನ್ ತಮ್ಮ ಎದುರಾಳಿ ಹಾಲೆಂಡ್‌ನ ಎರ್ವಿನ್ ಅಮಿ ವಿರುದ್ಧ ಗೆಲುವು ದಾಖಲಿಸುವ ಮೂಲಕ ತಮ್ಮ ಅಂಕವನ್ನು ಏಂಟಕ್ಕೆ ಏರಿಸಿಕೊಂಡು ಅಗ್ರ ಸ್ಥಾನದಲ್ಲಿದ್ದಾರೆ.