ನವದೆಹಲಿ: ಫೆಬ್ರವರಿ 5ರೊಳಗೆ ರಾಷ್ಟ್ರೀಯ ಕ್ರೀಡಾ ಫೆಡರೇಷನ್ನಿಂದ ಮಾನ್ಯತೆ ಪಡೆದ, ರಾಜ್ಯದ ಎಲ್ಲ ಕ್ರೀಡಾ ಅಸೋಸಿಯೇಷನ್ಗಳ ಪಟ್ಟಿಯನ್ನು ನೀಡುವಂತೆ ಕೇಂದ್ರಕ್ರೀಡಾ ಸಚಿವಾಲಯ ಎಲ್ಲ ರಾಜ್ಯ ಸರ್ಕಾರಗಳಿಗೆ ಗುರುವಾರ ಪತ್ರ ಬರೆದಿದೆ.
ಮಾನ್ಯತೆ ಪಡೆದ ಅಸೋಸಿಯೇಷನ್ನ ಪದಾಧಿಕಾರಿಗಳ ಪಟ್ಟಿ ಮತ್ತು ಅವರ ವಿಳಾಸ, ಫೋನ್ ನಂಬರ್ ಹಾಗೂ ಈಮೇಲ್ ಅಡ್ರೆಸ್ ಸಹ ಕಳುಹಿಸುವಂತೆ ಎಲ್ಲ ರಾಜ್ಯ ಕ್ರೀಡಾ ಕಾರ್ಯದರ್ಶಿಗಳಿಗೆ ಬರೆದಿರುವ ಪತ್ರದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ ಸೂಚಿಸಿದೆ. ಅದೇ ಮಾದರಿಯಲ್ಲಿ ರಾಜ್ಯದ ಒಲಿಂಪಿಕ್ಸ್ ಅಸೋಸಿಯೇಷನ್ನ ಸವಿವರನ್ನೂ ಕಳುಹಿಸಿಕೊಡುವಂತೆ ಕೋರಿದೆ.
ಕೇಂದ್ರ ಕ್ರೀಡಾ ಸಚಿವಾಲಯ ಒಟ್ಟು 53 ರಾಷ್ಟ್ರೀಯ ಫೆಡರೇಷನ್ಗಳಿಗೆ ಮಾನ್ಯತೆ ನೀಡಿದೆ. ಹೀಗಾಗಿ ರಾಷ್ಟ್ರೀಯ ಮಾನ್ಯತೆ ಪಡೆದಿರುವ ರಾಜ್ಯಗಳಲ್ಲಿನ ಫೆಡರೇಷನ್ಗಳು ಪಂದ್ಯಾವಳಿಗಳನ್ನು ಆಯೋಜಿಸಲು ಕೇಂದ್ರದ ನೆರವನ್ನು ಪಡೆಯುತ್ತಿವೆ.