ಮುಂಬೈ: ಸೋಮವಾರದಿಂದ ಆರಂಭವಾಗಲಿರುವ ಅಖಿಲ ಭಾರತ ಪುರುಷ ಹಾಗೂ ಮಹಿಳೆಯರ ಟೆನಿಸ್ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ಆಂಧ್ರಪ್ರದೇಶದ ವಿಷ್ಣು ವರ್ಧನ್‌ಗೆ ಗುರುವಾರ ಅಗ್ರ ಶ್ರೇಯಾಂಕ ನೀಡಲಾಗಿದೆ.
ಡೆವಿಸ್ ಕಪ್‌ನಲ್ಲಿ ಆಡಲು ಉತ್ತಮ ವಾತಾವರಣ ನೀಡುವಂತೆ ಆಗ್ರಹಿಸಿ ಬಂಡಾಯ ಎದ್ದಿರುವ ಗುಂಪಿನಲ್ಲಿರುವ ವಿಷ್ಣು ವರ್ಧನ್ ದಕ್ಷಿಣ ಕೊರಿಯಾಗೆ ತೆರಳಲಿರುವ ಡೆವಿಸ್ ಕಪ್ ತಂಡದಿಂದ ಹೊರಗುಳಿದಿದ್ದು, ಸೋಮವಾರದಿಂದ ಆರಂಭವಾಗಲಿರುವ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರನಾಗಿ ಹೊರಹೊಮ್ಮಿದ್ದಾರೆ. ತಮಿಳು ನಾಡಿನ ವಿಜಯ್ ಸುಂದರ್ ಪ್ರಕಾಶ್ ಎರಡನೇ ಶ್ರೇಯಾಂಕದಲ್ಲಿದ್ದರೆ, ಆಂಧ್ರಪ್ರದೇಶದ ಪಿ.ಸಿ.ವಿಘ್ನೇಶ್ ಮೂರನೇ ಶ್ರೇಯಾಂಕದಲ್ಲಿದ್ದಾರೆ.