ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಿಡಿಎಫ್ಎ ಪಂದ್ಯಾವಳಿಯ ಭಾನುವಾರದ ಪಂದ್ಯದಲ್ಲಿ ಎಂಇಟಿ ತಂಡ 2-1 ಅಂತರದಲ್ಲಿ ಜಯಗಳಿಸಿದೆ.
ಮಧ್ಯಾಹ್ನ ನಡೆದ ಪಂದ್ಯದಲ್ಲಿ ಎಂಇಟಿ ಹಾಗೂ ಸೌತ್ ಯುನೈಟೆಡ್ ನಡುವಿನ ಪಂದ್ಯದಲ್ಲಿ ಎಂಇಟಿ ತಂಡ 2-1 ಅಂತರದಲ್ಲಿ ಜಯ ಸಾಧಿಸಿತು. ಎಂಇಟಿ ಪರ ಅಯ್ಯಪ್ಪ (8ನೇ ನಿಮಿಷ) ಹಾಗೂ ಲೋಕೇಶ್ವರ ಸಿಂಗ್ (54ನೇ ನಿಮಿಷ) ಗೋಲು ಗಳಿಸಿಕೊಟ್ಟರು. ಅತ್ತ, ಸೌತ್ ಯುನೈಟೆಡ್ ತಂಡದ ಪರವಾಗಿ ವಿಘ್ನೇಶ್ (52ನೇ ನಿಮಿಷ) ಗೋಲು ದಾಖಲಿಸಿದರು.