ಧರ್ಮಶಾಲಾ: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ 3-2 ಅಂತರದಿಂದ ಗೆದ್ದು ಕೊಂಡ ಭಾರತ ತಂಡ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಆಂಗ್ಲರ ವಿರುದ್ಧ ಸರಣಿ ಆರಂಭವಾದಾಗ ಭಾರತ 117 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿತ್ತು. ಈಗ 119 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೂರು ವರ್ಷಗಳ ನಂತರ ಅಗ್ರಸ್ಥಾನಕ್ಕೇರಿದೆ.
ಆದರೆ 121 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಸರಣಿಯಲ್ಲಿ ಹೋರಾಟ ಆರಂಭಿಸಿದ್ದ ಇಂಗ್ಲೆಂಡ್. ಸರಣಿ ಸೋತ ನಂತರ ಎರಡು ರೇಟಿಂಗ್ ಪಾಯಿಂಟ್ ಕಳೆದುಕೊಂಡು 119ಕ್ಕೆ ಕುಸಿದಿದೆ. ಆದರೆ, ದಶಾಂಶದಲ್ಲಿ 0.2 ಪಾಯಿಂಟ್‌ಗಳಿಂದ ಮುಂದಿರುವ ಭಾರತ ನಂ.1 ಸ್ಥಾನ ಅಲಂಕರಿಸಿದೆ.
ಇಂಗ್ಲೆಂಡ್ ವಿರುದ್ಧ ಜನವರಿ 19ರಂದು ಮೂರನೇ ಪಂದ್ಯ ಗೆದ್ದಾಗಲೇ ಭಾರತ ನಂ.1 ಸ್ಥಾನಕ್ಕೇರಿತ್ತು.