ನವದೆಹಲಿ: ಕೊರಿಯಾ ವಿರುದ್ಧ ನಡೆಯಲಿರುವ ಡೇವಿಸ್ ಕಪ್ ಪಂದ್ಯಾವಳಿ ಗೆಲುವಿನ ಬಗ್ಗೆ ಆತ್ಮವಿಶ್ವಾಸ ಹೊಂದಿರುವ ಭಾರತ, ಅನುಭವಿ ಆಟಗಾರರನ್ನೇ ಕಣಕ್ಕಿಳಿಸಿದೆ. ಡೇವಿಸ್ ಕಪ್ಗೆ ಸಂಬಂಧಿಸಿದಂತೆ ಹಲವು ಹಿರಿಯ ಆಟಗಾರರು ವಿವಾದ ಎಬ್ಬಿಸಿದ ಹಿನ್ನೆಲೆಯಲ್ಲಿ, ಭಾರತೀಯ ಟೆನಿಸ್ ಸಂಸ್ಥೆ (ಎಐಟಿಎ) ಉತ್ಸಾಹದಲ್ಲಿರುವ, ನೈಜ ಆಟ ಪ್ರದರ್ಶಿಸುವ ಹಾಗೂ ದೊಡ್ಡ ಭರವಸೆಗಳ ಬೊಗಳೆಗಳಿಂದ ದೂರವಿರುವಂಥಾ ಆಟಗಾರರನ್ನೇ ಕಣಕ್ಕಿಳಿಸುತ್ತಿರುವುದರಿಂದ ಭಾರತೀಯ ಟೆನಿಸ್ ಅಭಿಮಾನಿಗಳಲ್ಲಿ “ÉÈÛ¦}Ú’ ಆಟಗಾರರಿಲ್ಲದ ಡೇವಿಸ್ ಪಡೆಯ ಬಗ್ಗೆ ಕುತೂಹಲ ಕೆರಳಿಸಿದೆ.
ಇಲ್ಲಿನ ಆರ್. ಕೆ. ಖನ್ನಾ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿರುವ ಭಾರತೀಯ ಆಟಗಾರರು, ನಾಯಕರು ಈ ಬಾರಿ ಕಪ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಡೆಯಲಿರುವ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಭಾರತದ ಪರವಾಗಿ ಕಣಕ್ಕಿಳಿಯಲಿರುವ ಮಾಜಿ ಚಾಂಪಿಯನ್ ವಿ. ಎಂ. ರಂಜೀತ್, ವೈಜಯಂತ್ ಮಾಲಿಕ್ ಹಾಗೂ ಮೀಸಲು ಆಟಗಾರರಾದ ಅರ್ಜುನ್ ಖಾಂಡೆ, ಅಶ್ವಿನ್ ವಿಜಯ ರಾಘವನ್ ಹಾಗೂ ನಾಯಕ ಎಸ್.ಪಿ. ಮಿಶ್ರಾ ಸೇರಿದಂತೆ, ಎಲ್ಲರೂ ತರಬೇತುದಾರ ಜಿಲಾನ್ ಅಲಿ ಅವರ ಹದ್ದಿನ ದೃಷ್ಟಿಯಡಿಯಲ್ಲೇ ತರಬೇತಿ ಪಡೆದಿದ್ದಾರೆ.
ಭಾರತದ ತಂಡದಲ್ಲಿ ಇರುವ ದೈತ್ಯ ಶಕ್ತಿಯೆಂದರೆ ಲಿಯಾಂಡರ್ ಪೇಸ್. ಆದರೆ, ಅವರಿನ್ನೂ ಭಾರತ ತಂಡವನ್ನು ಸೇರಿಕೊಂಡಿಲ್ಲ. ಪೂರವ್ ರಾಜಾ ಅವರೂ ಭಾರತ ತಂಡವನ್ನೂ ಸೇರಿಕೊಳ್ಳಬೇಕಿದೆ.