ಕ್ರೀಡೆ

ಒಲಿಂಪಿಕ್ಸ್‌ನಲ್ಲಿ ಬಾಕ್ಸರ್‌ಗಳಿಗೆ ಹೆಡ್ ಗಾರ್ಡ್ ತೆಗೆದು ಹಾಕಿದ ಎಐಬಿಎ

Published On :

ಲಾಸ್ ಎಂಜಲೀಸ್: ಇನ್ನು ಒಲಿಂಪಿಕ್ಸ್ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಬಾಕ್ಸರ್‌ಗಳು ಹೆಡ್ ಗಾರ್ಡ್ ಬಳಸುವಂತಿಲ್ಲ ಮತ್ತು ಸ್ಪರ್ಧೆಯಲ್ಲಿ ಪ್ರೋ ಸ್ಟೈಲ್ ಸ್ಕೋರಿಂಗ್ ಪದ್ಧತಿ ಜಾರಿಗೆ ತರಲಾಗಿದೆ. ಬಾಕ್ಸಿಂಗ್‌ನಲ್ಲಿ ಹಲವಾರು  ಬದಲಾವಣೆಗಳನ್ನು ಮಾಡಲಾಗಿದೆ.
ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ (ಎಐಬಿಎ) ತನ್ನ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಅದರಲ್ಲಿ 2 ಮಹತ್ವದ ಬದಲಾವಣೆಗಳನ್ನು ಮಾಡಿರುವುದು ಎಲ್ಲರ ಗಮನ ಸೆಳೆದಿದೆ.
ಹೆಡ್‌ಗಾರ್ಡ್ ತೆಗೆದು ಹಾಕಿರುವುದು ಮತ್ತು ಪ್ರೋ ಸ್ಟೈಲ್ ಸ್ಕೋರಿಂಗ್ ಪದ್ಧತಿ ಜಾರಿಗೆ ತಂದಿರುವುದು ಯುವ ಬಾಕ್ಸರ್‌ಗಳ ವೃತ್ತಿ ಜೀವನಕ್ಕೆ ಅಡ್ಡಿ ಉಂಟುಮಾಡುವ ಸಾಧ್ಯತೆಗಳಿವೆ.
1984 ಲಾಸ್ ಎಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟಕ್ಕಿಂತ ಮೊದಲು ಹೆಡ್ ಗಾರ್ಡ್ ಬಳಕೆ ಆರಂಭವಾಗಿದೆ. ಆದರೆ, ಈ ವರ್ಷ ಅಕ್ಟೋಬರ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಷಿಪ್ ಮತ್ತು ರಿಯೋ ಡಿ ಜನೈರೋ 2016ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪುರುಷ ಬಾಕ್ಸರ್‌ಗಳು ಹೆಡ್ ಗಾರ್ಡ್‌ಗಳನ್ನು ಬಳಸುವಂತಿಲ್ಲ.
ಆದರೆ, ಬಾಕ್ಸರ್‌ಗಳ ಮೆದುಳಿಗೆ ಗಾಯವಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಡ್ ಗಾರ್ಡ್ ಇಲ್ಲದೆ ಸ್ಪರ್ಧೆಯಲ್ಲಿ ಭಾಗವಹಿ ಸುವುದು ಸರಿ ಎನಿಸುತ್ತಿದೆ. ಹೆಡ್ ಗಾರ್ಡ್ ಇಲ್ಲದೆ ಹೋರಾಡುವುದರಿಂದ ಮೆದುಳಿಗೆ ಹೊಡೆತ ಬೀಳುವುದನ್ನು ತಡೆಗಟ್ಟಬಹುದು ಎಂದು ಹಲವಾರು ವೈದ್ಯಕೀಯ ಅಧ್ಯಯನಗಳು ತಿಳಿಸಿವೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ಮುಖ್ಯಸ್ಥ ಚಾರ್ಲ್ಸ್ ಬಲ್ಟರ್ ಹೇಳಿದ್ದಾರೆ.
'ಬಾಕ್ಸರ್‌ಗಳು ಸ್ಪರ್ಧೆಗಿಳಿದಾಗ ಹೆಡ್ ಗಾರ್ಡ್‌ಗಳು ಅಘಾತಗಳನ್ನು ತಪ್ಪಿಸುತ್ತವೆ ಎಂಬುದಕ್ಕೆ ಯಾವುದೇ ರೀತಿಯ ಸಾಕ್ಷ್ಯಗಳಿಲ್ಲ. 1982ರಲ್ಲಿ ಬಾಕ್ಸಿಂಗ್ ಮೇಲೆ ನಿಷೇಧ ಹೇರಲು ಅಮೆರಿಕ ವೈದ್ಯಕೀಯ ಅಸೋಸಿಯೇಷನ್ ಮುಂದಾದಾಗ ಎಲ್ಲರಿಗೂ ಆತಂಕ ಉಂಟುಮಾಡಿತ್ತು. ಆಗಲೇ ಹೆಡ್ ಗಾರ್ಡ್ಸ್‌ಗಳನ್ನು ಜಾರಿಗೆ ತರಲಾಗಿದೆ. ಆದರೆ, ಇದುವರೆಗೂ ಹೆಡ್ ಗಾರ್ಡ್‌ಗಳು ಉಪಯೋಗವಾಗಿವೆ ಎಂದು ಸಾಬೀತಾಗಿಲ್ಲ' ಎಂದು ಬಟ್ಲರ್ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.