ಜೊಕೊವಿಚ್ಗೆ ಸೋಮ್ ಸವಾಲು
ಭಾರತದ ಸಿಂಗಲ್ಸ್ ಟೆನಿಸ್ ತಾರೆ ಸೋಮ್ದೇವ್ ದೇವ್ವರ್ಮನ್ ಋತುವಿನ ಮಹತ್ವದ ಪಂದ್ಯವೊಂದರಲ್ಲಿ ಭಾಗವಹಿಸುತ್ತಿದ್ದಾರೆ. ಎಟಿಪಿ ಮಿಯಾಮಿ ಮಾಸ್ಟರ್ಸ್...

ಮಿಯಾಮಿ: ಭಾರತದ ಸಿಂಗಲ್ಸ್ ಟೆನಿಸ್ ತಾರೆ ಸೋಮ್ದೇವ್ ದೇವ್ವರ್ಮನ್ ಋತುವಿನ ಮಹತ್ವದ ಪಂದ್ಯವೊಂದರಲ್ಲಿ ಭಾಗವಹಿಸುತ್ತಿದ್ದಾರೆ. ಎಟಿಪಿ ಮಿಯಾಮಿ ಮಾಸ್ಟರ್ಸ್ ಪಂದ್ಯಾವಳಿಯ ಪ್ರಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಚ್ ಅವರನ್ನು ಎದುರಿಸಲಿದ್ದಾರೆ.
ಶ್ರೇಯಾಂಕ ಪಡೆಯದ ಭಾರತದ ಆಟಗಾರ ದ್ವಿತೀಯ ಸುತ್ತಿನ ಪಂದ್ಯದಲ್ಲಿ ವಿಶ್ವದ 80ನೇ ರ್ಯಾಂಕಿಂಗ್ ಆಟಗಾರ ಫ್ರಾನ್ಸ್ನ ಎಡಾರ್ಡ್ ರೋಜರ್ ವೆಸ್ಸೆಲಿನ್ ಅವರನ್ನು 4-6, 6-4, 7-5 ಸೆಟ್ಗಳಿಂದ ಪರಾಭವಗೊಳಿಸಿದರು.
ಈ ಜಯದೊಂದಿಗೆ ಎಡಾರ್ಡ್ ವಿರುದ್ಧ ಆಡಿದ ಎರಡು ಪಂದ್ಯಗಳಲ್ಲಿ ಒಂದು ಸೋಲು ಮತ್ತು ಒಂದು ಜಯದೊಂದಿಗೆ ಸಮಬಲ ಸಾಧಿಸಿದಂತಾಗಿದೆ. 2009ರಲ್ಲಿ ನಡೆದ ಪಂದ್ಯದಲ್ಲಿ ಸೋಮ್ದೇವ್ ಸೋಲನುಭವಿಸಿದ್ದರು.
ಈಗ ಆರು ಬಾರಿ ಗ್ರಾನ್ ಸ್ಲ್ಯಾಮ್ ಗೆದ್ದಿರುವ ಜೊಕೊವಿಚ್ ವಿರುದ್ಧ ಹೋರಾಡಲು ಸಿದ್ಧವಾಗಿದ್ದಾರೆ. ಈ ಹಿಂದೆ ಸೋಮ್ದೇವ್ ಇನ್ನೊಬ್ಬ ವಿಶ್ವದ ಬಲಿಷ್ಠ ಟೆನಿಸ್ ತಾರೆ ರಫೆಲ್ ನಡಾಲ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ್ದರು.
ಇನ್ನು ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಮಹೇಶ್ ಭೂಪತಿ ಮತ್ತು ಜತೆಯಾಟಗಾರ ಬಹಮಾಸ್ನ ಡೇನಿಯಲ್ ನೆಸ್ಟೋರ್ ಜೋಡಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ.
ಭಾರತ- ಬಹಮಾಸ್ ಜೋಡಿ, ಮೊದಲ ಸುತ್ತಿನಲ್ಲಿ ವಸ್ಸೆಲಿನ್ನ ರಿಚರ್ಡ್ ಗಾಸ್ಕ್ವೆಟ್ ಮತ್ತು ಇಡಾರ್ಡ್ ರೋಜರ್ ಜೋಡಿಯನ್ನು 7-6 (3), 6-3 ನೇರ ಸೆಟ್ಗಳ ಅಂತರದಿಂದ ಸೋಲಿಸುವ ಮೂಲಕ ದ್ವಿತೀಯ ಸುತ್ತಿಗೆ ಲಗ್ಗೆ ಹಾಕಿತು.
ಪಂದ್ಯಾವಳಿಯಲ್ಲಿ 3ನೇ ಶ್ರೇಯಾಂಕ ಪಡೆದಿರುವ ಭಾರತ- ಬಹಮಾಸ್ ಜೋಡಿ, ಪಂದ್ಯದ ಮೊದಲ ಸೆಟ್ನಲ್ಲಿ ಟೈ-ಬ್ರೇಕರ್ ಮೂಲಕ ಜಯ ಕಂಡುಕೊಂಡಿತು. ನಂತರ ದ್ವಿತೀಯ ಸುತ್ತಿನಲ್ಲಿ ಸುಲಭವಾಗಿ ಜಯ ಸಾಧಿಸಿತು.
ಭೂಪತಿ- ನೆಸ್ಟೋರ್ ಜೋಡಿ ದ್ವಿತೀಯ ಸುತ್ತಿನಲ್ಲಿ ಸ್ಪೇನ್ನ ನಿಕೋಲಾಸ್ ಅಲ್ಮಾಗ್ರೋ ಮತ್ತು ಆಸ್ಟ್ರಿಯಾದ ಓಲಿವರ್ ಮಾರ್ಚ್ ಜೋಡಿಯನ್ನು ಎದುರಿಸಲಿದೆ. ನಿಕೋಲಾಸ್ ಮತ್ತು ಓಲಿವರ್ ಜೋಡಿ, ಮೊದಲ ಸುತ್ತಿನಲ್ಲಿ ಕೊಲಂಬಿಯಾದ ಜೂವಾನ ಸೆಬಾಸ್ಟಿಯನ್ ಕೆಬಲ್ ಮತ್ತು ಮೆಕ್ಸಿಕೋದ ಸಾಂಟಿಗೋ ಗೋಜಾಲೆಜ್ ಜೋಡಿಯನ್ನು 6-3, 6-4 ನೇರ ಸೆಟ್ಗಳ ಅಂತರದಿಂದ ಪರಾಭವಗೊಳಿಸಿದೆ.
ಇನ್ನು ಪಂದ್ಯಾವಳಿಯಲ್ಲಿ 7ನೇ ಶ್ರೆಯಾಂಕ ಪಡೆದಿರುವ ಭಾರತದ ಲಿಯಾಂಡರ್ ಪೇಸ್ ಮತ್ತು ಫ್ರಾನ್ಸ್ನ ಮಿಚೆಲ್ ಲಾಡ್ರಾ ಜೋಡಿ ಸಹ ದ್ವಿತೀಯ ಸುತ್ತಿಗೆ ಪ್ರವೇಶಿಸಿದೆ. ಪೇಸ್ ಮತ್ತು ಲಾಡ್ರಾ ಜೋಡಿ ಮೊದಲ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಕ್ರಿಸ್ಟೋಫರ್ ಕಾಸ್ ಮತ್ತು ಫಿಲಿಪ್ ಕೊಹ್ಲಾಸ್ಚೀಬರ್ ಜೋಡಿಯನ್ನು 6-3, 7-5 ಸೆಟ್ಗಳಿಂದ ಸೋಲಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


