ತೋಳ ದಾಳಿ: 42 ಜನರಿಗೆ ಗಾಯ
ಇಂಡಿ: ತಾಲೂಕಿನ ಸಾಲೋಟಗಿ, ಸಾತಪೂರ, ಇಂಗಳಗಿ ಗ್ರಾಮಗಳ ಸುಮಾರು 42 ಜನರನ್ನು ಶನಿವಾರ ತೋಳ ಕಡಿದು ಗಾಯಗೊಳಿಸಿದ್ದು, ಇವರಲ್ಲಿ ಐವರಿಗೆ ಗಂಭೀರ ಗಾಯಗಳಾಗಿವೆ. ಬಳಿಕ ಗ್ರಾಮಸ್ಥರೇ ತೋಳವನ್ನು ಹಿಡಿದು ಕೊಂಡಿದ್ದಾರೆ.
ಆರಂಭದಲ್ಲಿ ಸಾಲೋಟಗಿ ಗ್ರಾಮದ ಹೊಲವೊಂದರಲ್ಲಿ ಕಾಣಿಸಿಕೊಂಡ ತೋಳ, ಅಲ್ಲಿ ಕೆಲಸ ಮಾಡುತ್ತಿದ್ದ ಕೆಲವರ ಮೇಲೆರಗಿ ಕಚ್ಚಿತು. ಬಳಿಕ ಹೊಲದಲ್ಲಿದ್ದ ಇತರರನ್ನು ಅಟ್ಟಾಡಿಸಿಕೊಂಡು ಹೋಗಿ ಕಚ್ಚಿದೆ. ಜನರು ಗುಂಪು ಸೇರಿ ಅದನ್ನು ಓಡಿಸಲು ಯತ್ನಿಸುತ್ತಿದ್ದಂತೆ ತೋಳ ಹತ್ತಿರದಲ್ಲೇ ಇರುವ ಸಾತಪುರ ಗ್ರಾಮಕ್ಕೆ ತೆರಳಿತು. ಅಲ್ಲಿಯೂ ಬಹಿರ್ದೆಸೆಗೆ ಕುಳಿತಿದ್ದ ಬಾಲಕರನ್ನು ಕಚ್ಚಿದೆ. ಅಲ್ಲಿಯೂ ಹತ್ತಿರದಲ್ಲಿ ಹೊಲದಲ್ಲಿದ್ದ ಗ್ರಾಮಸ್ಥರ ಮೇಲೆರಗಿ ಗಾಯಗೊಳಿಸಿದೆ.
ಅಲ್ಲಿಂದ ಓಡಿದ ತೋಳ ಇಂಗಳಗಿ ಗ್ರಾಮದಲ್ಲೂ ಜನರ ಮೇಲೆ ದಾಳಿ ನಡೆಸಿದೆ. ಈ ಮೂರು ಗ್ರಾಮಗಳ ಸುಮಾರು 42 ಜನರನ್ನು ಮದ ಬಂದ ತೋಳ ಕಚ್ಚಿ ಗಾಯಗೊಳಿಸಿದೆ. ಇವರಲ್ಲಿ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

