ಐಪಿಎಲ್ನಲ್ಲಿ ಬಾಜಿ ಕಟ್ಟುವ ಪರಿ
ಮುಂಬೈ: ಸ್ಪಾಟ್ ಫಿಕ್ಸಿಂಗ್ ತನಿಖೆಯ ಸಲುವಾಗಿ ಬಂಧಿತನಾಗಿದ್ದ ವಿಂದು ದಾರಾ ಸಿಂಗ್ ಐಪಿಎಲ್ನಲ್ಲಿ ಬೃಹತ್ ಪ್ರಮಾಣದ ಬೆಟ್ಟಿಂಗ್ ಜಾಲದ ಬಗ್ಗೆ ಬಾಯ್ಬಿಟ್ಟಿದ್ದು, ಹಲವು ಹಂತಗಳಲ್ಲಿ ಈ ಜಾಲ ಕಾರ್ಯನಿರ್ವಹಿಸುತ್ತಿದೆ.
ಐಪಿಎಲ್ ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದಂತೆ, ಬೆಟ್ಟಿಂಗ್ ಕೂಡ ಹೆಚ್ಚಾಗುತ್ತಾ ಸಾವಿರಾರು ಕೋಟಿಯ ವ್ಯವಹಾರವಾಗಿ ಬಿಂಬಿತವಾಗಿದೆ. ಹಾಗಾಗಿ ಪ್ರತಿ ಐಪಿಎಲ್ ಆವೃತ್ತಿಯಲ್ಲೂ ಬುಕ್ಕಿಗಳು ದೇಶದಾದ್ಯಂತ ಸಂಘಟಿತವಾಗಿ ದೂರವಾಣಿ ಮುಖಾಂತರ ಬೆಟ್ಟಿಂಗ್ ನಡೆಸುತ್ತಿದ್ದಾರೆ.
ಬೆಟ್ಟಿಂಗ್ ಪ್ರಕ್ರಿಯೆ ಹೆಚ್ಚು ದೂರವಾಣಿ ಮುಖಾಂತರ ನಡೆಯುತ್ತಿರುವ ಹಿನ್ನಲೆಯಲ್ಲಿ 400 ರಿಂದ 500 ಕರೆಗಳು ಕಾನ್ಫರೆನ್ಸ್ ಕಾಲ್ಗಳ ಮೂಲಕ ಕ್ರೀಡಾಂಗಣದಿಂದ ಬುಕ್ಕಿಗಳಿಗೆ ನೇರ ಸಂಪರ್ಕ ಸಾಧಿಸಿ, ಮಾಹಿತಿಗಳನ್ನು ರವಾನಿಸುತ್ತಿದ್ದಾರೆ. ಈ ಸಂಪರ್ಕದ ಮೂಲಕ ಬರುವ ವಿವರಗಳು ಟಿವಿಗಳಲ್ಲಿ ಒಂದು ಎಸೆತ ಆಗುವ ಮುನ್ನವೇ ಅಂದರೆ ಸುಮಾರು 1 ನಿಮಿಷಕ್ಕೂ ಮುನ್ನವೆ ಅದರ ಮಾಹಿತಿಗಳನ್ನು ಬುಕ್ಕಿಗಳಿಗೆ ರವಾನಿಸಲಾಗುತ್ತದೆ. ನಂತರ ಬುಕ್ಕಿಗಳು ಪ್ರತಿ ಎಸೆತದಲ್ಲೂ ಬೆಟ್ಟಿಂಗ್ ಮಾಡುತ್ತಾರೆ. ಈ ರೀತಿಯ ಪ್ರಕ್ರಿಯೆ ಪ್ರತಿ ಪಂದ್ಯದಲ್ಲೂ ನಡೆಯುತ್ತದೆ.
ಸ್ಪಾಟ್ ಫಿಕ್ಸಿಂಗ್ನಲ್ಲಿ ಸಿಕ್ಕಿ ಬಿದ್ದಿರುವ ಚಾಂಡಿಲಾ ಹಾಗೂ ಅಂಕಿತ್ ಒಂದು ಓವರ್ನಲ್ಲಿ ಎಷ್ಟು ರನ್ ನೀಡುತ್ತಾರೆ ಎಂದು ಬೆಟ್ಟಿಂಗ್ ಮಾಡುವುದು ಬೆಳಕಿಗೆ ಬಂದಿದ್ದು ಇದರ ಜತೆಗೆ, ಪ್ರತಿ ಪಂದ್ಯದಲ್ಲಿ ಟಾಸ್ ಯಾರು ಗೆಲ್ಲುತ್ತಾರೆ ಎಂಬುದರಿಂದ ಹಿಡಿದು ನಂತರ ಬ್ಯಾಟ್ಸ್ಮನ್ ಔಟಾಗುವುದು, ಪ್ರತಿ ಸೆಷನ್ನಲ್ಲಿ ಎಷ್ಟು ರನ್ಗಳಿಸಲಾಗುವುದು ಎಂದು ಬೆಟ್ಟಿಂಗ್ ನಡೆಯುತ್ತದೆ. ಇನ್ನು ಆಟದ ಹೊರತಾಗಿಯೂ ಕ್ರೀಡಾಂಗಣದಲ್ಲಿ ನಡೆಯುವ ಇತರೆ ಘಟನೆಗಳ ಮೇಲೂ ಬೆಟ್ಟಿಂಗ್ ನಡೆಯುವುದು ಖಚಿತವಾಗಿದೆ. ಫೆಡ್ಲೈಟ್ ಪಂದ್ಯದಲ್ಲಿ ಲೈಟ್ಗಳು ಆಫ್ ಆಗುವುದೇ, ರಾತ್ರಿ ವೇಳೆ ಎಷ್ಟು ಆಟಗಾರರು ಸನ್ಗ್ಲಾಸ್ ಬಳಸುತ್ತಾರೆ, ಇದರ ಜತೆಗೆ ಪಂದ್ಯದ ವೇಳೆ ಮೈದಾನದಲ್ಲಿ ನಾಯಿ ಓಡಾಡುವುದೇ ಎಂಬ ಬೆಟ್ಟಿಂಗ್ ಕೂಡ ನಡೆದಿದೆ. ಪಂದ್ಯಗಳ ನಂತರ ನಡೆಯುವ ಪಾರ್ಟಿಗಳು ಮುಕ್ತಾಯದ ನಂತರ ಬುಕ್ಕಿಗಳು ಆಟಗಾರರೊಂದಿಗೆ ಸಂಪರ್ಕ ಸಾಧಿಸುತ್ತಾರೆ. ಅಲ್ಲದೆ ಈ ವೇಳೆ ಫಿಕ್ಸಿಂಗ್ ಮಾಡಲು ಆಟಗಾರರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ಅಲ್ಲದೆ ಪಂದ್ಯಗಳ ಮಧ್ಯೆ ತೆಗೆದುಕೊಳ್ಳುವ ಸ್ಟ್ರಾಟೆಜಿಕ್ ಟೈಮ್ ಬುಕ್ಕಿಗಳು ತಮ್ಮ ಸಂಪರ್ಕವನ್ನು ನಡೆಸಲು ಹೆಚ್ಚು ಅನುಕೂಲವಾಗುತ್ತದೆ ಎಂದು ಬುಕ್ಕಿಗಳು ತಿಳಿಸಿದ್ದಾರೆ.
ತಮ್ಮ ಸಂಪರ್ಕವನ್ನು ಸುಲಭವಾಗಿಸಲು ಬುಕ್ಕಿಗಳು ಯುಕೆ ಮೂಲದ 'ಬೆಟ್ಫೇರ್' ವೆಬ್ಸೈಟ್ ಹಾಗೂ ಇತ್ತೀಚಿಗೆ ಆ್ಯಂಡ್ರಾಯ್ಡ್ ಹಾಗೂ ಐ ಫೋನ್ ಅಪ್ಲಿಕೇಶನ್ಗಳನ್ನು ಬಳಸಿಕೊಳ್ಳಲಾಗುವುದು. ಇದರಿಂದ ಬುಕ್ಕಿಗಳು ಪೊಲೀಸರಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.
ಈ ಐಪಿಎಲ್ ಬೆಟ್ಟಿಂಗ್ ಪ್ರಕರಣ ಮುಂಬೈ ಭೂಗತ ಲೋಕದ ದಾವೂದ್ ಇಬ್ರಾಹಿಂ ಕೈವಾಡದ ಮೇಲೆ ಬೆಳಕು ಚೆಲ್ಲಿದೆ. ಈ ಬೆಟ್ಟಿಂಗ್ ಜಾಲದಲ್ಲಿ ದಾವೂದ್ ಗುಂಪಿನ ಹಿಡಿತ ಹೆಚ್ಚಾಗಿದ್ದು, ಆಟಗಾರರು ಬುಕ್ಕಿಗಳು ಹೇಳಿದಂತೆ ಕೇಳದಿದ್ದರೆ ಆಟಗಾರರಿಗೆ ಜೀವ ಬೆದರಿಕೆ ಹಾಕುವ ಸಾಧ್ಯತೆಗಳು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿದೆ.
ದಾವೂದ್ ಬೆಟ್ಟಿಂಗ್ ಜಾಲ
-ಮುಂಬೈ ಅನ್ನು ದೇಶದ ಬೆಟ್ಟಿಂಗ್ ಕೇಂದ್ರವಾಗಿಟ್ಟುಕೊಂಡು ದಾವೂದ್ ಸಹೋದರ ಅನೀಸ್ ಈ ಬೆಟ್ಟಿಂಗ್ ಜಾಲವನ್ನು ನಡೆಸುತ್ತಿದ್ದಾನೆ.
-ಗುಜರಾತ್, ರಾಜಸ್ಥಾನ ಬುಕ್ಕಿಗಳಿಗೆ ಬೆಟ್ಟಿಂಗ್ ನಡೆಸಲು ಅನುಕೂಲವಾಗಿದ್ದು, ಇತ್ತೀಚೆಗೆ ಪುಣೆ ಸಹ ಬುಕ್ಕಿಗಳಿಗೆ ಹೆಚ್ಚು ಅನುಕೂಲವಾದ ಸ್ಥಳವಾಗಿತ್ತು.
-ದಾವೂದ್ ಗುಂಪು 2 ದಶಕಗಳ ಹಳೆಯ ಹವಾಲಾ ಸಂಪರ್ಕಗಳನ್ನು ಬಳಸಿಕೊಂಡು ಬೆಟ್ಟಿಂಗ್ ಜಾಲವನ್ನು ನಡೆಸುತ್ತಿದೆ.
-ಮುಂಬೈನಲ್ಲಿ ಕೆಲ ದೊಟ್ಟ ಮಟ್ಟದ ಬುಕ್ಕಿಗಳಿದ್ದು, ಶೊಭಾನ್ ಮೆಹ್ತಾ (ಅಲಿಯಾಸ್'ಕಾಲಾಚೌಕಿ'), ಬಾಲಿವುಡ್ ಮಂದಿಯನ್ನು ನಿಯಂತ್ರಿಸುವ ಕುಶಾಲ್, ಸುನಿಲ್ ಅಭಿಚಂದನಿ, ಮೂಸಾ ಪೈಕ್ ಮುಂಬೈನಿಂದ ಬೆಟ್ಟಿಗ್ ಜಾಲ ನಡೆಸುತ್ತಿರುವ ಬುಕ್ಕಿಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

