ಕ್ರೀಡೆ

ಮಹಾರಾಷ್ಟ್ರದ ಧ್ರುವ, ಸಿದ್ದಾಂತ್ ಫೈನಲ್‌ಗೆ

Published On :

ಬೆಂಗಳೂರು: ಆಕ್ರಮಣಕಾರಿ ಆಟ ಪ್ರದರ್ಶಿಸುವ ಮಹಾರಾಷ್ಟ್ರದ ಧ್ರುವ ಸುನೀಶ್ ಮತ್ತು ಸಿದ್ದಾಂತ ಜಗದೀಶ್ ಬಂತಿಯಾ ಅವರು ಏಷ್ಯನ್ ಜೂನಿಯರ್ ರ್ಯಾಂಕಿಂಗ್ ಟೆನಿಸ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಫೈನಲ್ ಪ್ರವೇಶಿಸಿದ್ದಾರೆ.ಧೃವ ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕದ ಆದಿಲ್ ಕಲ್ಯಾಣ್‌ಪುರ ಅವರನ್ನು 6-2, 6-4 ನೇರ ಸೆಟ್‌ಗಳಿಂದ ಸೋಲಿಸಿ ಪೈನಲ್ ಪ್ರವೇಶಿಸಿದರು.
ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಸಿದ್ದಾಂತ್ ಅವರು ಗುಜರಾತ್‌ನ ಮೇಘ್ ಪಟೇಲ್ ವಿರುದ್ಧ 6-7 ( 7), 6-3, 6-2 ಪ್ರಯಾಸದ ಜಯ ಸಾಧಿಸಿದರು. ಹೀಗಾಗಿ ಈಗ ಫೈನಲ್‌ನಲ್ಲಿ ಧ್ರುವ ಮತ್ತು ಸಿದ್ದಾಂತ್ ಅವರನ್ನು ಎದುರಿಸಲಿದ್ದಾರೆ. ಇನ್ನು ಬಾಲಕಿಯರ ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ತನ್ವಿ ಭಟ್ ಅವರು 3ನೇ ಶ್ರೇಯಾಂಕ ಪಡೆದಿರುವ ಶಿವಾನಿ ಇಂಗಲ್ ಅವರನ್ನು 7-5, 6-2 ನೇರ ಸೆಟ್‌ಗಳಿಂದ ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದರು. ಇನ್ನೊಂದು ಸೆಮಿಫೈನಲ್ ಪಂದ್ಯದಲ್ಲಿ ಆಂಧ್ರಪ್ರದೇಶದ ಸಮಾ ಸಾಥ್ವಿಕಾ ಅವರು ಶಾಕಿ ಹುಮೇರಾ ಅವರನ್ನು 6-2, 6-0 ನೇರ ಸೆಟ್‌ಗಳಿಂದ ಪರಾಭವಗೊಳಿಸಿದರು. ಈಗ ಫೈನಲ್ ಪಂದ್ಯದಲ್ಲಿ ತನ್ವಿ ಭಟ್ ಮತ್ತು ಸಮಾ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.