ಚಾಂಪಿಯನ್ ಕನಸಲ್ಲ್ಲಿ ಸೆರೆನಾ
ಪ್ಯಾರಿಸ್: ತಮ್ಮ ಹನ್ನೊಂದು ವರ್ಷಗಳ ವೃತ್ತಿಜೀವನದಲ್ಲಿ ಕೇವಲ ಒಂದೇ ಒಂದು ಬಾರಿ ಪ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿರುವ ಅಮೆರಿಕದ ಆಟಗಾರ್ತಿ ಸೆರೆನಾ ವಿಲಿಯಮ್ಸ್ ರೊಲ್ಯಾಂಡ್ ಗ್ಯಾರೊಸ್ನಲ್ಲಿ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಅಣಿಯಾಗುತ್ತಿದ್ದಾರೆ. ಈ ಪರೀಕ್ಷೆಯಲ್ಲಿ ಗೆದ್ದು ಪ್ರಶಸ್ತಿ ಗೆಲ್ಲುವ ಮೂಲಕ ಇದುವರೆಗೂ ತಮ್ಮ ಪಾಲಿಗೆ ಪ್ರಶ್ನೆಯಾಗಿಯೇ ಉಳಿದಿರುವ ರೊಲ್ಯಾಂಡ್ಡ್ ಗ್ಯಾರೋಸ್ ಕ್ಲೇ ಕೋರ್ಟ್ ಅಂಗಣದ ಸವಾಲನ್ನು ಅಂತ್ಯಗೊಳಿಸುವ ಸನ್ನಾಹದಲ್ಲಿದ್ದಾರೆ ಸೆರೆನಾ. ಕಳೆದ ವರ್ಷ ಆರಂಭಿಕ ಸುತ್ತಿನ ಪಂದ್ಯದಲ್ಲೇ ಸೋತಿದ್ದ ಸೆರೆನಾ, ಪಂದ್ಯಾವಳಿಯಿಂದ ಅನಿರೀಕ್ಷಿತವಾಗಿ ಬೇಗನೇ ನಿರ್ಗಮಿಸಿದ್ದರು. ಫ್ರಾನ್ಸ್ನ ವರ್ಜಿನಿ ರಝಾನೊ ಅವರ ವಿರುದ್ಧ ಮೂರು ನೇರ ಸೆಟ್ಗಳ ಸೋಲು ಕಂಡಿದ್ದ ಅವರು ಆ ಬಾರಿಯ ಫ್ರೆಂಚ್ ಓಪನ್ ಗೆಲ್ಲುವ ಕನಸಿನಿಂದ ದೂರ ಸರಿದಿದ್ದರು. ಆ ಅನಿರೀಕ್ಷಿತ ಸೋಲಿನಿಂದ ಆಘಾತಕ್ಕೊಳಗಾಗಿದ್ದ ಅವರು, ಟೆನಿಸ್ ಅಂಗಣದಲ್ಲೇ ಗಳಗಳನೇ ಅತ್ತಿದ್ದರು. ಅಂದು ಸುರಿಸಿದ್ದ ಕಣ್ಣೀರಿಗೆ ಬೆಲೆ ತಂದುಕೊಡುವ ಅವಕಾಶ ಬಂದಿದೆ. ಅಲ್ಲದೇ, ಸತತ ಸಾಧನೆಯಿಂದಾಗಿ ಪುನಃ ನಂಬರ್ಒನ್ ಪಟ್ಟ ಸಂಪಾದಿಸಿರುವ ಅವರು, ಈ ಬಾರಿ ಇಲ್ಲಿ ಚಾಂಪಿಯನ್ ಆಗುವ ಕನಸನ್ನು ಹೊತ್ತಿದ್ದಾರೆ.
ಮೊದಲೇ ಹೇಳಿದಂತೆ, ಇದುವರೆಗಿನ ತಮ್ಮ ವೃತ್ತಿಜೀವನದಲ್ಲಿ ಒಟ್ಟು 11 ಬಾರಿ ಈ ಅಂಗಣದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರೂ, ಅವರಿಗೆ ಜಯ ಸಿಕ್ಕಿದ್ದು ಕೇವಲ ಒಂದು ಬಾರಿ ಮಾತ್ರ. 2002ರಲ್ಲಿ ಅವರು ಈ ಪಂದ್ಯಾವಳಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಆ ಫೈನಲ್ ಪಂದ್ಯದಲ್ಲಿ ತಮ್ಮ ಸೋದರಿ ಸೆರೇನಾ ವಿಲಿಯಮ್ಸ್ ಅವರನ್ನು ಸೋಲಿಸಿದ್ದ ಅವರು, ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. 2002ರಲ್ಲಿ ಅವರು ಪ್ರಶಸ್ತಿ ಗೆದ್ದ ಮೇಲೆ, ಕೇವಲ ಒಂದು ಬಾರಿ ಅವರು ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಕಳೆದ ಬಾರಿಯಂತೂ ಅವರು ವರ್ಜಿನಿ ವಿರುದ್ಧ ಅಚ್ಚರಿಯ ಸೋಲು ಕಂಡಿದ್ದರು. ಪಾದದ ಗಾಯದ ಸಮಸ್ಯೆಯಿಂದ 2010 ಹಾಗೂ 2011ರಲ್ಲಿ ಅವರು ಫ್ರೆಂಚ್ ಓಪನ್ನಲ್ಲಿ ಭಾಗವಹಿಸಲು ಆಗಿರಲಿಲ್ಲ. ಅಷ್ಟೇ ಅಲ್ಲದೇ, ಆ ಸಂದರ್ಭದಲ್ಲಿ ಅವರು, ಪಲ್ಮನರಿ ಎಂಬಾಲಿಸಮ್ ಸಮಸ್ಯೆಯಿಂದಲೂ ಬಳಲಿದ್ದರು. ಆದರೆ, ಈಗ ಮತ್ತೆ ವೃತ್ತೀಜೀವನದಲ್ಲಿ ಹೊಸ ಸಾಧನೆ ಮಾಡುವತ್ತ ಸಾಗುತ್ತಿರುವ ಸೆರೆನಾ, ಈ ಬಾರಿ ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

