ಆನಂದ್ ಪಂದ್ಯ ಡ್ರಾ

ಭಾರತದ ವಿಶ್ವನಾಥನ್ ಆನಂದ್ ಅವರು, ಲಂಡನ್ ಚೆಸ್...
ವಿಶ್ವನಾಥನ್ ಆನಂದ್
ವಿಶ್ವನಾಥನ್ ಆನಂದ್

ಲಂಡನ್: ಭಾರತದ ವಿಶ್ವನಾಥನ್ ಆನಂದ್ ಅವರು, ಲಂಡನ್ ಚೆಸ್ ಕ್ಲಾಸಿಕ್ ಪಂದ್ಯಾವಳಿಯ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಡ್ರಾ ಸಾಧಿಸಿದ್ದಾರೆ. ರಷ್ಯಾದ ವ್ಲಾದಿಮಿರ್ ಕ್ರಾಮ್ನಿಕ್ ವಿರುದ್ಧ ಸೆಣೆಸಿದ ಅವರು, ಪಂದ್ಯವನ್ನು ಡ್ರಾ ಮಾಡಿಕೊಂಡರು.

ಒಲಂಪಿಯಾ ಕಾನ್ಫೆರನ್ಸ್‌ನ ಸೆಂಟರ್‌ನಲ್ಲಿ ನಡೆದ ಪಂದ್ಯದಲ್ಲಿ ಆನಂದ್ ಕಪ್ಪು ಕಾಯಿಗಳೊಂದಿಗೆ ಕಣಕ್ಕಿಳಿದಿದ್ದರು.

ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದ ಆನಂದ್, ಕ್ರಾಮ್ನಿಕ್ ಅವರನ್ನು ಮಣಿಸಲೆತ್ನಿಸಿದರು. ಆದರೆ, ಅತ್ತ, ಕ್ರಾಮ್ನಿಕ್ ಸ್ಥಿತಪ್ರಜ್ಞತೆಯಿಂದ ಮುನ್ನಡೆದು ಆನಂದ್ ಅವರಿಗೆ ಸವಾಲಾಗಿ ನಿಂತರು. ಇಬ್ಬರ ಸಮಬಲದ ಹೋರಾಟದ ಫಲವಾಗಿ, ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com