ಕ್ರೀಡೆ

ಇಂಡಿಯಾ ಸಿಮೆಂಟ್ಸ್ ಜಯಭೇರಿ

ಇಂಡಿಯಾ ಸಿಮೆಂಟ್ಸ್ ಜಯಭೇರಿ
Published On :

ಮುಂಬೈ: ಅನುಭವಿ ಅಭಿನವ್ ಮುಕುಂದ್ರ ಆಕರ್ಷಕ ಶತಕದ ನೆರವಿನಿಂದ ಇಂಡಿಯಾ ಸಿಮೆಂಟ್ಸ್ ತಂಡ 7 ವಿಕೆಟ್ಗಳಿಂದ ಪ್ರಬಲ ಏರ್ ಇಂಡಿಯಾ ತಂಡವನ್ನು ಪರಾಭವಗೊಳಿಸುವುದರೊಂದಿಗೆ ಬಿಸಿಸಿಐ ಕಾರ್ಪೊರೇಟ್ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಹೊಸ್ತಿಲಲ್ಲಿ ನಿಂತಿದೆ.
ಇಲ್ಲಿನ ಎಸಿಎನ ಬಿಕೆಸಿ ಮೈದಾನದಲ್ಲಿ ಸೋಮವಾರ ನಡೆದ 'ಡಿ' ಗುಂಪಿನ ಎರಡನೇ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಏರ್ ಇಂಡಿಯಾ 50 ಓವರುಗಳಲ್ಲಿ 8 ವಿಕೆಟ್ ನಷ್ಟಕ್ಕೆ 272 ರನ್ಗಳಿಸಿತು. ಮತ್ತೆ ಬ್ಯಾಟಿಂಗ್ನಲ್ಲಿ ಮಿಂಚಿದ ಯುವರಾಜ್ ಸಿಂಗ್ (79ರನ್, 3 ಸಿಕ್ಸರ್, 8 ಬೌಂಡರಿ) ಹಾಗೂ ಸಚಿನ್ ರಾಣಾ (52) ಅವರು ಅರ್ಧಶತಕ ಬಾರಿಸಿ ತಂಡ ಉತ್ತಮ ಮೊತ್ತ ಪೇರಿಸಲು ಕಾರಣರಾದರು.
ಉತ್ತರವಾಗಿ ಇಂಡಿಯಾ ಸಿಮೆಂಟ್ಸ್ ತಂಡ ಕೇವಲ 3 ವಿಕೆಟ್ ನಷ್ಟಕ್ಕೆ 276 ರನ್ಗಳಿಸಿ ರೋಚಕ ಗೆಲವು ತನ್ನದಾಗಿಸಿಕೊಂಡಿತು. ಅಭಿನವ್ ಮುಕುಂದ್ (ಅಜೇಯ 133, 139 ಎಸೆತ, 2 ಸಿಕ್ಸರ್, 6 ಬೌಂಡರಿ) ಆಕರ್ಷಕ ಶತಕ ಸಿಡಿಸಿ ತಮ್ಮ ತಂಡಕ್ಕೆ ರೋಚಕ ಗೆಲವು ತಂದುಕೊಟ್ಟರು.
ಇಂದೇ ನಡೆದ 'ಡಿ' ಗುಂಪಿನ ಇನ್ನೊಂದು ಪಂದ್ಯದಲ್ಲಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ತಂಡ 4 ವಿಕೆಟ್ಗಳಿಂದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ತಂಡವನ್ನು ಪರಾಭವಗೊಳಿಸಿತು.
ಮೊದಲು ಬ್ಯಾಟ್ ಮಾಡಿದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 8 ವಿಕೆಟ್ ನಷ್ಟಕ್ಕೆ 272 ರನ್ಗಳಿಸಿತು. ಕರ್ನಾಟಕದ ಆಟಗಾರರಾದ ಬಿ. ಅಖಿಲ್ (63) ಮತ್ತು ಪವನ್ ದೇಶಪಾಂಡೆ (59) ಅರ್ಧಶತಕ ಸಿಡಿಸಿದರು.
ಆದರೆ ಈ ಗುರಿಯನ್ನು ಯಶಸ್ವಿಯಾಗಿ ಬೆಂಬತ್ತಿದ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ 6 ವಿಕೆಟ್ಗೆ 273 ರನ್ಗಳಿಸಿ ಗೆಲವಿನ ಕೇಕೆ ಹಾಕಿತು. ಎನ್. ಸೈನಿ (65) ಮತ್ತು ಆರ್. ಧವನ್ (ಅಜೇಯ 62) ಅರ್ಧಶತಕ ಗಳಿಸಿ ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ತಂಡದ ಜಯಭೇರಿಗೆ ಕಾರಣರಾದರು.
ಸಂಕ್ಷಿಪ್ತ ಸ್ಕೋರ್
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 8 ವಿಕೆಟ್ಗೆ 272 (ಬಿ. ಅಖಿಲ್ 63, ಪವನ್ ದೇಶಪಾಂಡೆ 59, ಶ್ರೀನಾಥ್ ಅರವಿಂದ್ ಅಜೇಯ 40, ಆರ್. ಧವನ್ 57ಕ್ಕೆ3, ಆರ್. ಬಿಷ್ತ್ 45ಕ್ಕೆ2). ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ 6 ವಿಕೆಟ್ಗೆ 273 (ಎನ್. ಸೈನಿ 65, ಆರ್. ಧವನ್ ಅಜೇಯ 62, ಯು. ಶರ್ಮಾ 41, ಆರ್. ಬಿಷ್ತ್ ಅಜೇಯ 20, ಸಿ. ವಿಲಿಯಮ್ಸ್ 35ಕ್ಕೆ2).
ಏರ್ ಇಂಡಿಯಾ 8 ವಿಕೆಟ್ಗೆ 272 (ಯುವರಾಜ್ ಸಿಂಗ್ 79, ಎಸ್. ರಾಣಾ ಅಜೇಯ 52, ರಾಹಿಲ್ ಶಾ 68ಕ್ಕೆ4, ಯೊ ಮಹೇಶ್ 62ಕ್ಕೆ2). ಇಂಡಿಯಾ ಸಿಮೆಂಟ್ಸ್ 3 ವಿಕೆಟ್ಗೆ 276 (ಅಭಿನವ್ ಮುಕುಂದ್ ಅಜೇಯ 133, ದಿನೇಶ್ ಕಾರ್ತಿಕ್ ಅಜೇಯ 41, ಸೋನು ಶರ್ಮಾ 55ಕ್ಕೆ2).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.