ಕ್ರೀಡೆ

ಜಯದ ರುಚಿಯೇ ಬೇರೆ

Published On :

ಒಂದು ಪಂದ್ಯಾವಳಿಯಲ್ಲಿ ಭಾಗವಹಿಸುವ ಅನುಭವವೇ ಬೇರೆ. ಭಾಗವಹಿಸಿದ ನಂತರ ಅದರಲ್ಲಿ ಆಡುವ ಅನುಭವ ಇನ್ನೂ ವಿಭಿನ್ನವಾಗಿರುತ್ತದೆ. ಆದರೆ, ಆಡಿದ ನಂತರ ಚಾಂಪಿಯನ್ ಪಟ್ಟ ಗೆದ್ದಾಗ ಉಂಟಾಗುವ ಸಂಭ್ರಮದ ಸವಿಯನ್ನು ಹೇಳತೀರದು. ಅಂತಹ ಒಂದು ಜಯದ ರುಚಿಯನ್ನು ಕರ್ನಾಟಕ ರಣಜಿ ತಂಡದ ಭಾಗವಾಗಿ ಸವಿಯುವುದು ನನ್ನ ಅದೃಷ್ಟವಾಗಿತ್ತು. ಅದು ಪದಾರ್ಪಣೆ ಮಾಡಿದ ವರ್ಷವೇ ನಮ್ಮ ತಂಡ ಚಾಂಪಿಯನ್ ಆದಾಗ ಉಂಟಾದ ಆನಂದಕ್ಕೆ ಪಾರವೇ ಇರಲಿಲ್ಲ.
ಮೈಸೂರಿನಲ್ಲಿ ಜಾರ್ಖಂಡ್ ವಿರುದ್ಧ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಭಾರತ ತಂಡದ ಮಾಜಿ ಆಟಗಾರ ರೋಜರ್ ಬಿನ್ನಿ ಅವರು ಕ್ಯಾಪ್ ನೀಡಿದ್ದು ನನ್ನ ಜೀವನದಲ್ಲೇ ಮರೆಯಲಾರದ ಕ್ಷಣವಾಗಿತ್ತು. ಇದು ನನ್ನ ವೃತ್ತಿಯಲ್ಲಿ ಆತ್ಮವಿಶ್ವಾಸ ವೃದ್ಧಿಸುವಂತೆ ಮಾಡಿತು. ಇತರ ಪಂದ್ಯಾವಳಿಗಳಿಗಿಂತ ರಣಜಿ ಟ್ರೋಫಿ ತುಂಬಾ ಭಿನ್ನವಾಗಿರುತ್ತದೆ. ಇದೇ ಮೊದಲ ಬಾರಿಗೆ ಆಯ್ಕೆಯಾದ ನಮಗೆ, ಆ ಮಾದರಿಯ ಕ್ರಿಕೆಟ್‌ಗೆ ಹೊಂದಿಕೊಳ್ಳಲು ಕೋಚ್ ಹಾಗೂ ಹಿರಿಯ ಆಟಗಾರರು ಪಟ್ಟ ಶ್ರಮ ದೊಡ್ಡದಾಗಿತ್ತು. ಪ್ರತಿ ಪಂದ್ಯದ ನಂತರ ನಾವು ಮಾಡಿದ ಚಿಕ್ಕಪುಟ್ಟ ತಪ್ಪುಗಳನ್ನು ಅವರು ಸರಿಯಾಗಿ ತಿಳಿಸುತ್ತಿದ್ದರು. ಅಲ್ಲದೆ, ಕ್ರೀಸ್‌ನಲ್ಲಿ ಹೆಚ್ಚಿನ ಸಮಯ ವಿಕೆಟ್ ಕಾಯ್ದುಕೊಂಡು ಎದುರಾಳಿ ಬೌಲರ್‌ಗಳನ್ನು ನಿಯಂತ್ರಿಸುವ ಕಲೆಯನ್ನು ಅವರು ನಮಗೆ ಮುತುವರ್ಜಿಯಿಂದ ತಿಳಿಸಿಕೊಡುತ್ತಿದ್ದರು. ಪಂದ್ಯಾವಳಿಯಲ್ಲಿ ವಿದರ್ಭ ವಿರುದ್ಧ ಲೀಗ್ ಹಂತದ ಪಂದ್ಯದಲ್ಲಿ 540 ರನ್‌ಗಳನ್ನು ಒಂದೂವರೆ ದಿನದಲ್ಲಿ ಚೇಸ್ ಮಾಡಿದಾಗ, ತಂಡದಲ್ಲಿ ದೊಡ್ಡ ಮಟ್ಟದ ವಿಶ್ವಾಸ ಮೂಡಿತ್ತು. ಅಂತಿಮವಾಗಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವ ಭಾಗ್ಯ ನಮ್ಮದು.

ಪಂದ್ಯ  8
ರನ್ 380

ಗರಿಷ್ಠ   90
 ಸರಾಸರಿ  34.54


- ನಿರೂಪಣೆ:  ಮಲ್ಲಿಕಾರ್ಜುನ ಕರಿಯಪ್ಪನವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.