ಸಂಕ್ಷಿಪ್ತ ಸುದ್ದಿ
ಬಿಡಿಎಫ್‌ಎ: ಬಾಷ್ ತಂಡಕ್ಕೆ ಜಯ
ಬೆಂಗಳೂರು: ಪ್ರಾಬಲ್ಯಯುತ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದ ಬಾಷ್ ತಂಡದ ಆಟಗಾರರು ಬಿಡಿಎಫ್‌ಎ ಸಿ ಡಿವಿಷನ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ದಕ್ಷಿಣ ಭಾರತ ವಿರುದ್ಧ ಗೆಲವು ದಾಖಲಿಸಿದೆ.
ಗುರುವಾರ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಾಷ್ ತಂಡವು 7-0 ಗೋಲುಗಳ ಅಂತರದಲ್ಲಿ ದಕ್ಷಿಣ ಭಾರತ ತಂಡದ ವಿರುದ್ಧ ಗೆಲವು ದಾಖಲಿಸಿತು. ಬಾಷ್ ತಂಡದ ಪರ ಸುರೇಶ್ (5), ಅರ್ಜುನ್ (12, 13, 33), ಬಿಜೋಯ್(15), ಪ್ರತಾಪ್ (22, 35)ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲವಿಗೆ ಕಾಣಿಕೆ ನೀಡಿದರು. ದಿನದ ಎರಡನೇ ಪಂದ್ಯದಲ್ಲಿ 515ಎಬಿಡಬ್ಲ್ಯೂಎಸ್ ತಂಡ ವಾಕ್‌ಒವರ್ ಮೂಲಕ ಮುಂದಿನ ಹಂತಕ್ಕೆ ಪ್ರವೇಶಿಸಿದೆ. ಪಂದ್ಯದ ವೇಳೆಗೆ ಹಿಂದೂ ಸೋಶಿಯಲ್ ತಂಡವು ಆಗಮಿಸದ ಕಾರಣ, 515ಎಬಿಡಬ್ಲ್ಯೂಎಸ್ ವಾಕ್‌ಒವರ್ ಪಡೆಯಿತು.
ಫೆಡರೇಷನ್ ಕಪ್ ಕಬಡ್ಡಿ: ರಾಜ್ಯಕ್ಕೆ ಜಯ
ಸೋನ್‌ಭದ್ರಾ: ಇದೇ ಮೊದಲ ಬಾರಿಗೆ ಆಯೋಜಿಸಲಾಗಿರುವ ಫೆಡರೇಷನ್ ಕಪ್ ಕಿರಿಯರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಭಾರತೀಯ ಕ್ರೀಡಾ ಪ್ರಾಧಿಕಾರ ತಂಡದ ವಿರುದ್ಧ ಗೆಲವು ದಾಖಲಿಸಿ ಶುಭಾರಂಭ ಮಾಡಿದೆ.
ಗುರುವಾರ ನಡಛೆದ ಜಿದ್ದಾಜಿದ್ದಿನ ಪಂದ್ಯದಲ್ಲಿ ಕರ್ನಾಟಕ ತಂಡ 31-29 ಅಂಕಗಳ ಅಂತರದಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ ತಂಡವನ್ನು ಮಣಿಸಿದೆ. ಪಂದ್ಯದ ಮೊದಲಾರ್ಧ ಕರ್ನಾಟಕ ತಂಡ 7-6 ಅಂಕಗಳಿಂದ ಕೂದಲೆಳೆಯ ಅಂತರದಲ್ಲಿ ಮುನ್ನಡೆ ಪಡೆದಿತ್ತು.
ಆದರೆ ಪಂದ್ಯದ ಎರಡನೇ ಅವಧಿ ಮುಕ್ತಾಯಗೊಂಡಾಗ ಉಭಯ ತಂಡಗಳು 24-24 ಅಂತರದ ಸಮಬಲ ಸಾಧಿಸಿ ಡ್ರಾ ಮಾಡಿಕೊಂಡವು. ನಂತರ ಉಭಯ ತಂಡಗಳಿಗೂ 5 ರೈಡ್‌ಗಳನ್ನು ನೀಡಲಾಯಿತು. ಈ ವೇಳೆ ಕರ್ನಾಟಕ 31 ಅಂಕಗಳನ್ನು ಪಡೆದುಕೊಂಡರೆ, ಭಾರತೀಯ ಕ್ರೀಡಾ ಪ್ರಾಧಿಕಾರ 2 ಅಂಕ ಳಿಂದ ಕರ್ನಾಟಕ ಗೆಲವು ದಾಖಲಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

