ಕ್ರೀಡೆ

ಐರ್ಲೆಂಡ್‌ಗೆ ಅಚ್ಚರಿಯ ಜಯ

ಐರ್ಲೆಂಡ್‌ಗೆ ಅಚ್ಚರಿಯ ಜಯ
Published On :

ಕಿಂಗ್‌ಸ್ಟನ್: ವಿಶ್ವ ಟಿ20 ಚಾಂಪಿಯನ್ ವೆಸ್ಟ್ ಇಂಡೀಸ್ ತಂಡ ತವರಿನ ಅಂಗಣದಲ್ಲೇ, ದುರ್ಬಲ ಐರ್ಲೆಂಡ್ ತಂಡದ ವಿರುದ್ಧ ಹೀನಾಯ ಸೋಲನುಭವಿಸಿದೆ.
ಬುಧವಾರ ಇಲ್ಲಿನ ಸಬೀನಾ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಐರ್ಲೆಂಡ್ ತಂಡವು 6 ವಿಕೆಟ್‌ಗಳ ಅಂತರದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಗೆಲವು ದಾಖಲಿಸಿದೆ.  ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 116 ರನ್ ಕಲೆ ಹಾಕಲಷ್ಟೇ ಶಕ್ತವಾಯಿತು. ನಂತರ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ತಂಡ 19.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 117 ರನ್ ಕಲೆ ಹಾಕುವ ಮೂಲಕ ಗೆಲವಿನ ಮಂದಹಾಸ ಬೀರಿತು.
ಪರದಾಡಿದ ವಿಂಡೀಸ್: ವಿಶ್ವದ ಖ್ಯಾತ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಒಳಗೊಂಡಿರುವ ವೆಸ್ಟ್ ಇಂಡೀಸ್ ತಂಡ ಬೃಹತ್ ಮೊತ್ತವನ್ನೇ ಕಲೆ ಹಾಕುವ ಲೆಕ್ಕಾಚಾರದಲ್ಲಿ ಕಣಕ್ಕಿಳಿಯಿತು. ಆದರೆ ಐರ್ಲೆಂಡ್ ಬೌಲಿಂಗ್ ದಾಳಿಗೆ ಉತ್ತರ ನೀಡಲು ಸಾಧ್ಯವಾಗದೇ ಪರದಾಡಿದ ಕೆರಿಬಿಯನ್ನರು, ಅಲ್ಪ ಮೊತ್ತಕ್ಕೆ ಇನಿಂಗ್ಸ್ ಅಂತ್ಯಗೊಳಿಸಿದರು.
ವೆಸ್ಟ್ ಇಂಡೀಸ್ ಪರ ಕ್ರಿಸ್ ಗೇಯ್ಲ್ 18 ರನ್ ಗಳಿಸಿದ್ದು, ತಂಡದ ವೈಯಕ್ತಿಕ ಗರಿಷ್ಠ ಮೊತ್ತವಾಗಿತ್ತು. ಉಳಿದಂತೆ ಮರ್ಲಾನ್ ಸ್ಯಾಮ್ಯುಯಲ್ಸ್ ಹಾಗೂ ಲೆಂಡ್ಲ್ ಸಿಮನ್ಸ್ ತಲಾ 16 ರನ್ ಗಳಿಸಿದರೇ, ಡ್ವೈನ್ ಸ್ಮಿತ್ 14 ಹಾಗೂ ಆ್ಯಂಡ್ರೆ ರಸ್ಸೆಲ್ 15 ರನ್ ದಾಖಲಿಸಿದರು. ಉಳಿದಂತೆ ಯಾವುದೇ ಬ್ಯಾಟ್ಸ್‌ಮನ್ ಎರಡಂಕಿ ರನ್ ಗಳಿಸಲಿಲ್ಲ.
ಐರ್ಲೆಂಡ್ ತಂಡದ ಪರ ಟಿಮ್ ಮುರ್ತಾಗ್, ಅಲೆಕ್ಸ್ ಕ್ಯೂಸಕ್, ಕೆವಿನ್ ಒಬ್ರೆಯಾನ್ ತಲಾ 2 ವಿಕೆಟ್ ಪಡೆದರು.
ಸುಲಭ ಗೆಲವು: ಅಲ್ಪ ಮೊತ್ತವನ್ನು ಬೆನ್ನಟ್ಟಿದ ಐರ್ಲೆಂಡ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತು. 8 ರನ್ ಗಳಿಸುವಷ್ಟರಲ್ಲೇ ಆರಂಭಿಕ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡ ಐರ್ಲೆಂಡ್‌ಗೆ ನೆರವಾಗಿದ್ದು, ಎಡ್ ಜೋಯ್ಸ್(ಅಜೇಯ 40) ಹಾಗೂ ಆ್ಯಂಡ್ರೂ ಪಾಂಯ್ಟರ್(32). ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಆಂರಭಿಕ ಕುಸಿತ ಕಂಡಿದ ತಂಡವನ್ನು ಗೆಲವಿನ ದಡ ಸೇರಿಸುವಲ್ಲಿ ಯಶಸ್ವಿಯಾದರು. ಐರ್ಲೆಂಡ್ ಪರ ಅಜೇಯವಾಗಿ ತಂಡವನ್ನು ಗೆಲವಿನ ದಡ ಸೇರಿಸಿದ ಎಡ್ ಜೋಯ್ಸ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್:
ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 116
ಕ್ರಿಸ್ ಗೇಯ್ಲ್ 18, ಸ್ಯಾಮ್ಯುಯೆಲ್ಸ್ 16, ಅಲೆಕ್ಸ್ ಕ್ಯೂಸಕ್ 17ಕ್ಕೆ2
ಐರ್ಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 117
ಎಡ್ ಜೋಯ್ಸ್ ಅಜೇಯ 40, ಆ್ಯಂಡ್ರೂ ಪಾಂಯ್ಟರ್ 32, ಸ್ಯಾಮ್ಯುಯಲ್ಸ್ ಬದ್ರೀ 18ಕ್ಕೆ2  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.