ಜೀವನ್, ಸನಮ್ ಶುಭಾರಂಭ
ಚಂಡೀಗಢ: ಅಗ್ರಶ್ರೇಯಾಂಕಿತ ಜೀವನ್ ನೆಡುಂಚೆಜಿಯಾನ್ ಹಾಗೂ ಎರಡನೇ ಶ್ರೇಯಾಂಕಿತ ಸನಮ್ ಸಿಂಗ್ ಅವರು 10 ಸಾವಿರ ಡಾಲರ್ ಬಹುಮಾನ ಮೊತ್ತದ ಚಂಡೀಗಢ ಐಟಿಎಫ್ ಫ್ಯೂಚರ್ಸ್ ಟೆನಿಸ್ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಭರವಸೆಯ ಆಟಗಾರ ಜೀವನ್ ಮಂಗಳವಾರ ನಡೆದ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಅಭಿಜೀತ್ ತಿವಾರಿ ಅವರನ್ನು 6-3, 6-4 ನೇರ ಸೆಟ್ಗಳಿಂದ ಪರಾಭವಗೊಳಿಸಿದರು. ಇಂದೇ ನಡೆದ ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಸನಮ್ ಸಿಂಗ್ ಅವರು 6-2, 7-5 ನೇರ ಸೆಟ್ಗಳಿಂದ ತೈಪೇಯ ಜೂಯಿ-ಚೆನ್ ಹಂಗ್ರನ್ನು ಸೋಲಿಸಿದರು.
ಎಡಗೈ ಆಟಗಾರ ಜೀವನ್ ಮೊದಲ ಸೆಟ್ ಹೋರಾಟದ ಆರಂಭದಲ್ಲೇ ಮೊದಲ ಸರ್ವ್ ಕಳೆದುಕೊಂಡು ಶುಭಾರಂಭ ಮಾಡುವಲ್ಲಿ ವಿಫಲರಾಗಿದ್ದರು. ಆದರೆ, ನಂತರ ಪ್ರಬಲವಾಗಿ ಮೇಲೆದ್ದು ಬಂದ ಭಾರತೀಯ ಆಟಗಾರ ನಿರಂತರ 4 ಅಂಕಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ 5-3ರಿಂದ ಮೇಲುಗೈ ಪಡೆದು ತಮ್ಮ ಹಿಡಿತ ಸಾಧಿಸಿದರು. ನಂತರದ ಗೇಮ್ ವಶಕ್ಕೆ ಪಡೆದು 1-0 ಮುನ್ನಡೆ ಪಡೆದರು.
ಎರಡನೇ ಸೆಟ್ನಲ್ಲಿ ಕೂಡ ಆತ್ಮವಿಶ್ವಾಸದಿಂದಲೇ ಆಟ ಮುಂದುವರಿಸಿದ ಜೀವನ್, ಎದುರಾಳಿಯಂದ ಸ್ವಲ್ಪ ಪ್ರತಿರೋಧ ವ್ಯಕ್ತವಾಯಿತಾದರೂ, ಸವಾಲುಗಳಿಗೆ ದಿಟ್ಟ ಉತ್ತರ ನೀಡುವುದರೊಂದಿಗೆ ಅಂತಿಮ ಗೆಲವು ತಮ್ಮದಾಗಿಸಿಕೊಂಡರು.
ಮತ್ತೊಂದು ಪಂದ್ಯದಲ್ಲಿ ಸನಮ್ ಸಿಂಗ್ ಕೂಡ ತಮ್ಮ ಸಾಮರ್ಥ್ಯವನ್ನು ಉತ್ತಮ ರೀತಿಯಲ್ಲಿಯೇ ಧಾರೆಯರೆಯುವ ಮೂಲಕ ನಿರೀಕ್ಷಿತ ಗೆಲವು ಸಾಧಿಸಿದರು.
ಸುಮಾರು ಒಂದು ಕಾಲು ಗಂಟೆ ಆಟದಲ್ಲಿ ಸನಮ್ಗೆ ಎರಡನೇ ಸೆಟ್ನಲ್ಲಿ ತೈಪೇ ಆಟಗಾರನಿಂದ ಕಠಿಣ ಸವಾಲು ಎದುರಾಗಿತ್ತು. ಆದರೂ, ಒತ್ತಡಕ್ಕೆ ಒಳಗಾಗದ ಭಾರತೀಯ ಆಟಗಾರ ಎದುರಾಳಿಯ ತಪ್ಪುಗಳ ಲಾಭ ಪಡೆದುಕೊಂಡು ಮುಂದಿನ ಸುತ್ತಿಗೆ ಹೆಜ್ಜೆ ಹಾಕಿದರು.
ದಿನದ ಇನ್ನೊಂದು ಪೈಪೋಟಿಯಲ್ಲಿ ಶಶಿಕುಮಾರ್ ಮುಕುಂದ್ 6-1, 6-1 ಸೆಟ್ಗಳಿಂದ ಅನ್ವೀತ್ ಬೇಂದ್ರೆ ಅವರಿಗೆ ಸೋಲುಣಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

